ಹತ್ತೊಂಬತ್ತು- ಇಪ್ಪತನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ದಲಿತ ಧ್ವನಿ ಜೋತಿಬಾ ಪುಲೆ. ಅವರ ಚಿಂತನೆಗಳು ಈಗಲೂ ಪ್ರಸ್ತುತ ಮತ್ತು ಅಂಬೇಡ್ಕರ್ ಅವರನ್ನು ಇಷ್ಟಪಡುವವರು ಪುಲೆ ಅವರನ್ನು ನಿರಾಕರಿಸುವಂತೆಯೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಸಾರುತ್ತದೆ ಕೃತಿ.
ಲೇಖಕಿ, ವೈದ್ಯೆ ಡಾ. ಎಚ್.ಎಸ್. ಅನುಪಮಾ ಅವರು ಬರೆದ ಪುಸ್ತಕ ಪುಲೆ ಅವರ ಜೀವನ ಚರಿತ್ರೆ ಜೊತೆಗೆ ಅವರು ಬದುಕಿದ್ದ ಕಾಲಘಟ್ಟವನ್ನು ತೆರೆದಿಡುತ್ತದೆ. ಜೋತಿಬಾರನ್ನು ಕುರಿತ ವಿವರಗಳು ಕಡಿಮೆ ಇರುವುದರ ಸವಾಲಿನ ನಡುವೆಯೂ ಲೇಖಕಿ ಸಮರ್ಥವಾಗಿ ಅವರ ಮಾಹಿತಿಯನ್ನು ಕಲೆಹಾಕಿ ಕೃತಿ ರಚಿಸಿದ್ದಾರೆ. ಅವರ ಕಾಲದ ಸಾಮಾಜಿಕ ಸ್ಥಿತಿ, ಇಂಗ್ಲಿಷ್ ಶಿಕ್ಷಣದಿಂದ ಉಂಟಾದ ಸುಧಾರಣೆ, ಸಾವಿತ್ರಿ ಪುಲೆ ಅವರ ಶ್ರಮವನ್ನು ಕೃತಿಕಾರರು ಮನೋಜ್ಞವಾಗಿ ವಿವರಿಸಿದ್ದಾರೆ.
©2024 Book Brahma Private Limited.