ಡಾ. ಪಿ.ವಿ. ಕೃಷ್ಣಮೂರ್ತಿ ಇವರ ‘ದಕ್ಷಿಣಾಪಥದ ಬಾಣರಸರು’ ಕೃತಿಯು ಶಾಸನಗಳ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿದೆ. ಆರು ಅಧ್ಯಾಯಗಳಲ್ಲಿ ತನ್ನ ವಿಸ್ತಾರವನ್ನು ಹೊಂದಿದೆ. ನಾಲ್ಕನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ದಕ್ಷಿಣ ಭಾರತದಲ್ಲಿ ಆಳಿದ ಬಾಣವಸರು, ಕ್ರಿ.ಶ. 450ರ ಕದಂಬರ ತಾಳಗುಂದ ಹಾಗೂ ಹಲ್ಮಿಡಿ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿರುವುದು ಇವರ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇವರ ಕುರಿತಾಗಿ ನೂರಕ್ಕೂ ಹೆಚ್ಚು ಶಾಸನಗಳಿರುವುದು ವಿಶೇಷವಾಗಿದೆ. ಈ ಶಾಸನಗಳನ್ನು ಒಂದೆಡೆ ಸಂಗ್ರಹಿಸಿ ಅಧ್ಯಯನಕ್ಕೊಳಪಡಿಸಿರುವರು. ಆರಂಭದಲ್ಲಿ ಪಲ್ಲವರ ಮಾಂಡಲೀಕರಾಗಿದ್ದು, ನಂತರದಲ್ಲಿ ದಕ್ಷಿಣ ಭಾರತದ ಕೆಲವು ಪ್ರದೇಶಗಳನ್ನು ತಮ್ಮ ಅಧೀನಕ್ಕೆ ವಶಪಡಿಸಿ ಕೊಂಡರು. ಇವರು ಅಂದು ಆಳ್ವಿಕೆಯಲ್ಲಿದ್ದ ಅನೇಕ ಮನೆತನಗಳೊಂದಿಗೆ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧವನ್ನಿಟ್ಟುಕೊಂಡು ತಮ್ಮದೇ ಆದ ಕೊಡುಗೆಯನ್ನು ದಕ್ಷಿಣ ಭಾರತಕ್ಕೆ ನೀಡಿರುವುದು ವಿಶೇಷವಾಗಿದೆ.
©2024 Book Brahma Private Limited.