`ಚುರುಕು ಚಾವಡಿ’ ಕೃತಿಯು ಧರ್ಮಭಾರತೀ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಪ್ರಶ್ನೆಗಳು ಕೃಷ್ಣಾನಂದಶರ್ಮಾ ಅವರು ಕೇಳಿದ್ದು, ಉತ್ತರವನ್ನು ಜಗದೀಶಶರ್ಮಾ ಅವರು ನೀಡಿರುತ್ತಾರೆ. ಜೀವಿಯೊಬ್ಬ ತನ್ನನ್ನು ತಾನರಿಯಲು ತಪಸ್ಸಿನಲ್ಲಿ ಮಗ್ನನಾದ. ಮಂತ್ರರೂಪದ ಉತ್ತರ ದೊರೆಯಿತು. ಅದು ವೇದವಾಯಿತು. ಶಿಷ್ಯನೊಬ್ಬ ಜಿಜ್ಞಾಸುವಾಗಿ ಗುರುವಿನಲ್ಲಿ ಪ್ರಶ್ನೆ ಕೇಳಿದ. ಗುರು ಉತ್ತರಿಸಿದ. ಅದು ಉಪನಿಷತ್ ಆಯಿತು. ಯಜ್ಞದ ನಡುವಿನಲ್ಲೋ, ಬದುಕಿನ ಬೇಗೆಗೆ ಬೆಂದೋ, ಮುಂದಿನ ದಾರಿ ಕಾಣದಾಗಿಯೋ ಪ್ರಶ್ನೆ ಕೇಳಿದರು. ಅರಿತವರು ಇತಿಹಾಸವ ಅರುಹಿದರು. ಇದು ಪುರಾಣವಾಯಿತು. ಬದುಕುವುದು ಹೇಗೆ? ಎಂದು ಕೇಳಿದರು. ಬದುಕಬಯಸಿದವರು. ತಿಳಿದವರಿತ್ತ ಸಂವಿಧಾನ ಸ್ಮೃತಿಯಾಯಿತು. ಹೀಗೆ, ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಸನಾತನ ಸಾಹಿತ್ಯ ತನ್ನನ್ನು ಅನಾವರಣಗೊಳಿಸಿಕೊಂಡಿತು ಎಂಬುವುದನ್ನು ಇಲ್ಲಿ ಕಾಣಬಹುದು.
©2024 Book Brahma Private Limited.