ಚಿತ್ರಕಲಾವಿದ ಡಿ. ವಿ. ಹಾಲಭಾವಿ

Author : ಶಂಕ್ರಪ್ಪ ಎಂ. ಕುಂದಗೋಳ

Pages 172

₹ 125.00




Year of Publication: 2009
Published by: ಅವಿರತ ಪುಸ್ತಕ
Address: ನಂ. 70, 9ನೇ ಕ್ರಾಸ್, 1ನೇ ಮುಖ್ಯರಸ್ತೆ, ಅವಲಹಳ್ಳಿ, ಬಿಡಿಎ ಲೇಔಟ್, ಬೆಂಗಳೂರು-95

Synopsys

ಡಿ.ವಿ. ಹಾಲಭಾವಿ, ಕರ್ನಾಟಕ ಕಂಡ ಅಪರೂಪದ ಕಲಾವಿದರು. ತಮ್ಮನ್ನು ಕೇವಲ ವರ್ಣಚಿತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ರೇಖಾಚಿತ್ರ ಛಾಯಾಚಿತ್ರಗಳಲ್ಲಿ ತೊಡಗಿಸಿಕೊಂಡವರು.ಅವರು ಬರೆದ My Contemporary Artist ಎಂಬ ಗ್ರಂಥ ಸಮಕಾಲೀನ ಚಿತ್ರಕಲೆ, ಕಲಾವಿದರನ್ನು ಪರಿಚಯಿಸುವ ಕೃತಿ. ಅಲ್ಲದೇ ’ನನ್ನ ಸಿಲೋನ ಪ್ರವಾಸ' ಎಂಬ ಕೃತಿ ಕಲಾವಿದನೊಬ್ಬನ ಪ್ರವಾಸ ಕಥನವಾಗಿದೆ. ಅವರು ಆಗಿನ ಕಾಲದಲ್ಲಿಯೇ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆರ್ಟ್‌ಗಿಲ್ಡ್ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದುದು ಹೆಮ್ಮೆಯ ವಿಷಯ. ಗ್ರಾಮೀಣ ಪ್ರದೇಶದಿಂದ ಬಂದ ಹಾಲಭಾವಿ ಅವರು ತಮ್ಮನ್ನು ಕಲಾ ಜಗತ್ತಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು ಮತ್ತು ಧಾರವಾಡ - ಪಾಗೂ ಉತ್ತರ ಕರ್ನಾಟಕದ ಸಾಂಸ್ಕೃತಿಕ ಪರಿಸರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಕೃತಿಡಿ. ವಿ. ಹಾಲಭಾವಿಯವರ ಜೀವನ ಮತ್ತು ಸಾಧನೆಯ ಚಿತ್ರಣವನ್ನು ಒಳಗೊಂಡಿದೆ.

Related Books