ವೃತ್ತಿ ರಂಗಭೂಮಿಯ ಕಲಾವಿದರಾಗಿ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುವ ಕೆಲಸ ಮಾಡಿದ ಕಲಾವಿದೆ ಚಿಂದೋಡಿ ಲೀಲಾ. ಅವರು ಕೇವಲ ನಟಿ ಮಾತ್ರವಲ್ಲದೆ ತಮ್ಮದೇ ನಾಟಕ ಕಂಪೆನಿ ನಡೆಸಿ ಕಲಾವಿದರಿಗೆ ಆಶ್ರಯ ನೀಡಿದ್ದವರು. ಇವರ ಜೀವನ ಚಿತ್ರಣ ಈ ಕೃತಿಯ ಉದ್ದೇಶ.
ಸರಸ್ವತಿ ಅರುಣಕುಮಾರ್ ಅವರು ವಾಣಿಜ್ಯದಲ್ಲಿ ಡಿಪ್ಲೊಮಾ ಪಡೆದು, ದಾವಣಗೆರೆಯ ಪಾಲಿಟೆಕ್ನಿಕ್ನಲ್ಲಿ ವಿದ್ಯಾಭ್ಯಾಸದ ನಂತರ ಕೆಲವು ವರ್ಷಗಳ ಕಾಲ ಖಾಸಗೀ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಈಗ ಹವ್ಯಾಸಿ ಬರಹಗಾರರಾಗಿದ್ದುಕೊಂಡು - ಕನ್ನಡ ಸಾಹಿತ್ಯ, ಸಂಗೀತ, ಕಲೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ತಳೆದಿದ್ದಾರೆ. ಪುಸ್ತಕಗಳನ್ನು ಕೊಂಡು ಓದುವುದು ಮತ್ತು ಸಮಾನ ಮನಸ್ಕರೊಡನೆ ಸಾಹಿತ್ಯಕ ಚರ್ಚೆ ಇವರಿಗೆ ಪ್ರಿಯವಾದ ಹವ್ಯಾಸ. ಇವರು ಬರೆದ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಮತ್ತು ಮಾಸಿಕಗಳಲ್ಲಿ ಪ್ರಕಟವಾಗಿವೆ. ...
READ MORE