ಚೆನ್ನಬಸವ ಬೆಟ್ಟದೂರು ಇವರು ಅನಿವಾರ್ಯ ಕಾರಣಗಳಿಂದ ಉರ್ದು ಮಾಧ್ಯಮದಲ್ಲಿ ಓದಿದ್ದರೂ ಕನ್ನಡದ ಮೇಲಿನ ಪ್ರೀತಿ,ಕಾಳಜಿ ಅಭಿಮಾನ ಇವರಿಗೆ ಕಡಿಮೆಯಾಗಿಲ್ಲ. ನವಾಬರು ಮತ್ತು ರಜಾಕಾರರ ಆಡಳಿತದಿಂದಾಗಿ ಇವರು ತನ್ನ ದೇಸಿ ಸ್ವಂತಿಕೆಯು ನಶಿಸಿಹೊಂದಿದ್ದ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ತನ್ನ ಜೀವಂತಿಕೆಯ ಸೊಗಡನ್ನು ತಂದುಕೊಡುವಲ್ಲಿ ಅನನ್ಯ ಪಾತ್ರವಹಿಸಿದ್ದಾರೆ. ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ ಮಾತ್ರವಲ್ಲದೇ , ತಮ್ಮದೇ ಸ್ವತಂತ್ರ ನಾಲ್ಕು ಕೃತಿಗಳನ್ನು ರಚಿಸಿರುವ ಇವರು , ಬಸವಣ್ಣನವರ ಚಿಂತನೆಗಳಿಗೆ ಸಾಹಿತ್ಯಿಕ ಸಂಪಾದನೆಯ ಮರುಚೌಕಟ್ಟು ಕಟ್ಟಿದವರು. ಚೆನ್ನಬಸವ ಬೆಟ್ಟದೂರರ ಬದುಕನ್ನು ಡಾ. ಸ್ವಾಮಿರಾವ್ ಕುಲಕರ್ಣಿಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...
READ MORE