ಛತ್ರಪತಿ ಶಾಹೂ-ಜನರ ನೋವಿಗೆ ಮಿಡಿದ ಪ್ರಾಣಮಿತ್ರ

Author : ಎಚ್.ಎಸ್. ಅನುಪಮಾ

Pages 140

₹ 110.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲು ಸಹಾಯ ಮಾಡಿದ್ದು ಛತ್ರಪತಿ ಶಾಹು ಮಹಾರಾಜ್‌. ಜ್ಯೋತಿಬಾ ಫುಲೆ ನಂತರ ಸಮರ್ಥವಾಗಿ ಜಾತಿ ವಿರೋಧಿ ಚಳವಳಿಗಳನ್ನು ಮುನ್ನಡೆಸಿದವರು. ಛತ್ರಪತಿ ಶಿವಾಜಿಯ ವಂಶಸ್ಥರಾಗಿದ್ದ ಇವರು ತಂದ ಸುಧಾರಣೆಯ ಪರಿಣಾಮ, ಸತಿಪದ್ದತಿ, ದೇವದಾಸಿ ಪದ್ದತಿಗಳು ಇಲ್ಲವಾಗಿ ಮಹಾರಾಷ್ಟ್ರ ಹೊಸ ಮೆರಗು ಪಡೆಯಿತು. ಇವರ ಸೇವೆಯನ್ನು ಗುರುತಿಸಿ ಕೇಂಬ್ರಿಜ್ ವಿಶ್ವವಿದ್ಯಾಲಯ ಎಲ್‌ ಎಲ್‌ ಡಿ ಪದವಿ  ನೀಡಿ ಗೌರವಿಸಿತು. 

ಇಂತಹ ಮಹಾನ್‌ ಸುಧಾರಕನನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ ಲೇಖಕಿ, ಡಾ. ಎಚ್‌.ಎಸ್‌. ಅನುಪಮಾ. ’ಜನರ ನೋವಿಗೆ ಮಿಡಿದ ಪ್ರಾಣಮಿತ್ರ’ ಎಂದು ಕೃತಿಯಲ್ಲಿ ಬರೆಯಲಾದ ಅಡಿಟಿಪ್ಪಣಿ ಶಾಹೂ ಮಹಾರಾಜರ ಅನುಪಮ ಕೊಡುಗೆಗೆ ಕನ್ನಡದ ಶ್ಲಾಘನೆ ಇದ್ದಂತಿದೆ. 

ಪುಸ್ತಕದಲ್ಲಿ ಉಲ್ಲೇಖಿಸಲಾಗಿರುವ ಶಾಹು ಅವರ ಮಾತುಗಳು ಹೀಗಿವೆ: 'ಕೆಲವರು ಜಾತಿ ಬೇಧವಿರಲಿ, ಆದರೆ ಜಾತಿ ದ್ವೇಷ ಬೇಡ ಎನ್ನುತ್ತಾರೆ. ಅವರ ಅಜ್ಞಾನಕ್ಕಾಗಿ ನಾನು ಮರುಗುತ್ತೇನೆ. ಯಾಕೆಂದರೆ ಜಾತಿಭೇಧವೇ ಜಾತಿದ್ವೇಷಕ್ಕೆ ಕಾರಣವಾಗಿರುವುದು. ಹೀಗಾಗಿ ಕಾರ್ಯವನ್ನು ಇಲ್ಲವಾಗಿಸಲು ಕಾರಣವನ್ನೂ ಕಿತ್ತೊಗೆಯಬೇಕು, ಚಾಂದ್ವೇಷವು ಹಿಂದೂಸ್ತಾನದ ಪುರಾತನ ರೋಗ, ಆದರೆ ಶಾಸ್ತ್ರದಲ್ಲಿ ಸಮಾನ ಪ್ರಸವಾಲ್ಮೀಕಾ ಜಾತಿ' ಎಂಬ ವಚನವಿದೆ, ಎಂದೇ ಸಮಾನ ಭಾವ, ಸಮಾನ ಆಕೃತಿ, ಸಮಾನ ಉತ್ಪತ್ತಿ ಇರುವವರನ್ನೆಲ್ಲ ಒಂದೇ ಜಾತಿ ಎಂದು ಭಾವಿಸಬೇಕು. ಜಪಾನಿನ ಸಮುರಾಣಗಳನ್ನು ನೋಡಿ: ಮೊದಲು ಅವರು ತಮ್ಮನ್ನು ಶ್ರೇಷ್ಠರೆಂದು ಭಾವಿಸಿ ಉಳಿದವರನ್ನು ಹೀನಾಯವಾಗಿ ಕಾಣುತ್ತಿದ್ದರು. ಈಗ ಹಾಗಿಲ್ಲ. ಜಪಾನ್ ಪ್ರಬಲ ದೇಶವಾಗಬೇಕೆಂದು ನಿರ್ಧರಿಸಿ ತಮ್ಮ ಶ್ರೇಷ್ಠತೆಯ ಹಕ್ಕನ್ನು ತೊರೆದರು. ಆಪಾನಿನಲ್ಲಿ ಸಮುರಾಣಗಳು ಮಾಡಿದ್ದನ್ನು ಹಿಂದೂಸ್ತಾನದ ಬ್ರಾಹ್ಮಣ-ಕ್ಷತ್ರಿಯರೇಕೆ ಮಾಡಬಾರದು? ಏಕೆಂದರೆ ಜಾತಿ ಭೇದ ಮುಲಿವ ಪ್ರಯತ್ನ ಕೇವಲ ಕೆಳವರ್ಗದಿಂದ ಅರಂಭಗೊಂಡರೆ ಅದರ ಪರಿಣಾಮ ಅನರ್ಥಕಾಲಿಯಾಗುವ ಸಂಭವವಿದೆ. ಎಂದೇ ಶ್ರೇಷ್ಠರೆಂದು ಕರೆದುಕೊಳ್ಳುವ ಜನ ಸ್ವಾರ್ಥತ್ಯಾಗದ ಉದಾಹರಣೆಯಾಗಿ ಉಳಿದವರಿಗೆ ಮಾದರಿಯಾಗಬೇಕು.'

ಅಲ್ಲದೆ ಅವರು, ’ಧರ್ಮ ಎಂದರೇನು? ದೇವರ ಬಳಿಗೆ ಹೋಗುವ ಮಾರ್ಗ, ವಿವಿಧ ದೇಶಗಳಲ್ಲಿ, ವಿವಿಧ ಹೆಸರಿನಲ್ಲಿ ಹುಟ್ಟಿಕೊಂಡ ಎಲ್ಲ ಧರ್ಮಗಳ ಉದ್ದೇಶವೂ ಒಂದೇ ಆಗಿದೆ. ನಗರ ತಲುಪಲು ಹಲವು ರಸ್ತೆಗಳಿವೆ. ಬೇರೆಬೇರೆ ರಸ್ತೆಯಿಂದ ನಗರಕ್ಕೆ ತಲುಪುವವರನ್ನು ದ್ವೇಷಿಸಲಾಗುತ್ತದೆಯೆ? ಇಂದು ಯಾವುದೇ ಧರ್ಮ ಆಚರಿಸಿ ಮನುಷ್ಯ ದೇವರ ಬಳಿ ಹೋದ ಪ್ರತ್ಯಕ್ಷ ಉದಾಹರಣೆಯಿಲ್ಲ. ಅಂಥ ಮಾರ್ಗದರ್ಶಕ ದೊರಕುವವರೆಗೆ ನಮ್ಮದಷ್ಟೇ ಒಳ್ಳೆಯದು ಎಂಬ ಟೊಳ್ಳು ಅಭಿಮಾನ ಬೆಳೆಸಿಕೊಳ್ಳುವುದು ಯಾರಿಗೂ ಒಳ್ಳೆಯದಲ್ಲ. ದೇಶಬಂಧುವಿನ ಸೇವೆ ಕೈಗೊಳ್ಳುವುದು, ಮನುಷ್ಯರಲ್ಲಿ ದೇವರನ್ನು ಕಾಣುವುದೇ ಈಗ ನಿಜವಾದ ಧರ್ಮ’, ಎಂದು ಪ್ರತಿಪಾದಿಸುತ್ತಾರೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books