ಚಲಂ

Author : ರವಿ ಬೆಳಗೆರೆ

Pages 192

₹ 125.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ತೆಲುಗಿನ ಪ್ರಸಿದ್ಧ ಲೇಖಕರಾದ ಗುಡಿಪಟಿ ವೆಂಕಟಾಚಲಂ ಅವರ ಜೀವನ ಚರಿತ್ರೆಯ ಕನ್ನಡಾನುವಾದ ಈ ಪುಸ್ತಕ. ತೆಲುಗಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿರುವಂತಹ ಚಲಂ ಅವರ ಜೀವನ ಮತ್ತು ಅವರು ಮಾಡಿದ ಸಾಹಿತ್ಯಕ ಮತ್ತು ಅವರ ಸಾಮಾಜಿಕ ಚಿಂತನೆಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ರವಿ ಬೆಳಗೆರೆ ಅವರು. ಸಮಾಜದಲ್ಲಿ ಮಹಿಳೆಯರು ಅನುಭವಿಸುವಂತಹ ಮಾನಸಿಕ ಮತ್ತು ಸಾಮಾಜಿಕ ನೋವುಗಳ ಕುರಿತು ಚಲಂ ಅವರ ಪುಸ್ತಕಗಳು ಬೆಳಕು ಚೆಲ್ಲುತ್ತಿದ್ದವು. ಸಮಾಜದಲ್ಲಿ ಮಹಿಳೆಯರು ಯಾವ ರೀತಿ ಧೈರ್ಯ ಗುಂದದೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕು ಎಂದು ತಮ್ಮ ಪುಸ್ತಕಗಳಲ್ಲಿ ಚಲಂ ಅವರು ವಿಶ್ಲೇಷಿಸಿದ್ದಾರೆ. ಇಂತಹ ಓರ್ವ ವ್ಯಕ್ತಿಯ ಜೀವನ ಚರಿತ್ರೆಯ ಕನ್ನಡಾನುವಾದವನ್ನು ರವಿ ಬೆಳಗೆರೆಯವರು ಕನ್ನಡ ಸಾಹಿತ್ಯ ಪ್ರೀಯರಿಗೆ ನೀಡಿದ್ದಾರೆ. ತಮ್ಮ ಬದುಕಿನುದ್ದಕ್ಕೂ ವಿಭಿನ್ನ ವಿಚಾರಧಾರೆಯೊಂದಿಗೆ ಓದುಗರನ್ನು ಆಕರ್ಷಿಸಿದವರು ಚಲಂ ಅವರು. ಬ್ರಾಹ್ಮಣ್ಯದ ಸಕಲ ರೀತಿ ನೀತಿಗಳನ್ನು ಧಿಕ್ಕರಿಸಿ ಬದುಕಿದವರು ಚಲಂ. ಜನಿವಾರ ತ್ಯಜಿಸಿ ಮಾಂಸಾಹಾರವನ್ನು ಸೇವಿಸಲು ಆರಂಭಿಸಿದರು. ಎಲ್ಲಾ ಜಾತಿಯ ಜನರೊಂದಿಗೆ ಬೆರೆತರು. ಈ ಕಾರಣಕ್ಕೆ ಅವರನ್ನು ಬ್ರಾಹ್ಮಣ ಸಮಾಜದಿಂದ ಬಹಿಷ್ಕರಿಸಲಾಯಿತಾದರೂ, ಅವರು ತಮ್ಮ ವಿಚಾರ ಧಾರೆಯನ್ನು ಬಿಟ್ಟು ಕೊಡಲಿಲ್ಲ. ಇಂತಹ ಉತ್ತಮ ಮೌಲ್ಯಗಳೊಂದಿಗೆ ಬದುಕಿದಂತಹ ವ್ಯಕ್ತಿಯ ಜೀವನ ಚರಿತ್ರೆ ಕನ್ನಡದ ಸಾಹಿತ್ಯ ಪ್ರೀಯರಿಗೆ ‘ಚಲಂ’ ರೂಪದಲ್ಲಿ ಲಭ್ಯವಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books