ಲೇಖಕ ಪ್ರೊ. ಬಿ.ಎಚ್. ಶ್ರೀಧರ ಅವರ ಕೃತಿ ʻಭಾವ ಸಮನ್ವಯʼ. ಕಾವ್ಯಮೀಮಾಂಸೆಯಲ್ಲಿ ಉಲ್ಲೇಖವಾದ ನವರಸಗಳನ್ನು ಹೊಸಗನ್ನಡ ಕಾವ್ಯ, ನಾಟಕಗಳೊಂದಿಗೆ ಅನುಸಂಧಾನಿಸಿರುವ ಅಪರೂಪದ ಕೃತಿ ಇದಾಗಿದೆ. ಪುಸ್ತಕದಲ್ಲಿ 11 ವರ್ಷಗಳಲ್ಲಿ ಪ್ರಕಟವಾದ ಶ್ರೀಧರ ಅವರ 13 ಗದ್ಯ ಕೃತಿಗಳಿವೆ.
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE