‘ಬೆರಗಿನ ಬೆಳಕಿಂಡಿ’ ವಿಜ್ಞಾನಿ-ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ಕಸ್ತೂರಿ ಮಾಸಪತ್ರಿಕೆಯ ನವನವೋನ್ಮೇಷ ಅಂಕಣಕ್ಕೆ ಬರೆದ ಲೇಖನಗಳ ಸಂಕಲನ. ವಿಜ್ಞಾನ ಬರವಣಿಗೆಗೆ ಬೇಕಾದ ಖಚಿತ ಮಾಹಿತಿ, ಸುಲಲಿತ ಭಾಷೆ ಹಾಗೂ ಸರಳ ನಿರೂಪಣೆಯ ರಸಗಂಧಗಳ ಹದವಾದ ಲೇಪನ ಇವರ ಶೈಲಿಯ ವೈಶಿಷ್ಟ್ಯ.
ತಂತ್ರಜ್ಞಾನದ ಹೊಸ ಹೊಸ ಕೌತುಕಗಳು ಈ ಪುಸ್ತಕದ ಪುಟ-ಪುಟಗಳಲ್ಲೂ ಪುಟಿಯುತ್ತಿವೆ. ಅದು ನೀರವ ರಾತ್ರಿಯ ನಿಮ್ಮ ಸುಖ ನಿದ್ದೆಯನ್ನು ಓಡಿಸುವ ಇ-ಹೊತ್ತಿಗೆ ನಿದ್ದೆಯೇ ಬರದಂತೆ ನಿಮಗೆ ಕಾಟ ಕೊಡುವ ಸೊಳ್ಳೆಯನ್ನು ನ್ಯಾನೋ ಈರುಳ್ಳಿಯಿಂದ ಓಡಿಸುವ ಬಗೆಗಿನ ಬರಹವಿರಬಹುದು. ನಾಳಿನ ಲೋಕದ ಅದೆಷ್ಟೋ ಹೊಳಹುಗಳನ್ನು ಅವರು ಬೆಳಕಿಂಡಿಯಲ್ಲಿ ಇಣುಕಿ ನೋಡಿದ್ದಾರೆ. ವಿಜ್ಞಾನಲೋಕದ ವಿವಿಧ ವಿದ್ಯಮಾನಗಳತ್ತ ಸದಾ ನೆಟ್ ನೋಟ ಹರಿಸುವ ಅವರ ಆಸಕ್ತಿಯ ದ್ಯೋತಕವೇ ಇಲ್ಲಿರುವ ಮಾಹಿತಿಗಳು.
©2024 Book Brahma Private Limited.