''ನ್ಯಾಯ ನಿಷ್ಠುರಿ, ದಾಕ್ಷಿಣ್ಯವರ ನಾನಲ್ಲಯ್ಯ, ಲೋಕವಿರೋಧಿ, ಶರಣನಾರಿಗಂಜುವನಲ್ಲ ಕೂಡಲ ಸಂಗಮದೇವನ ರಾಜತೇಜದಲ್ಲಪ್ಪೆನಾಗಿ ಶರಣನಾರಿಗಂಜುವನಲ್ಲ’’ ಎನ್ನುವ ಬಸವಣ್ಣನವರ ಸಾಲುಗಳು ಇಲ್ಲಿ ಮುಖ್ಯವೆನ್ನಿಸುತ್ತದೆ. ಬಸವಣ್ಣನವರ ಜೀವನ ಚರಿತ್ರೆಯನ್ನು ವಿವರಿಸುವ ಈ ಕೃತಿಯಲ್ಲಿ ಹರಿಹರನ ರಗಳೆಗಳು ಪಾಲುಪಡೆದುಕೊಂಡಿದೆ. ಹರಿಹರನ ರಗಳೆ: ಕುಣಿಯುತ್ತಿರ್ಪ್ಪೆ ನಾನು ನೀನು ಕುಣಿಸಿದಂತೆ ಬಸವಲಿಂಗ | ಮರೆತುಬಿಡದೆ ಕರವ ಪಿಡಿದು ರಕ್ಷಿಸೆನ್ನ ಬಸವಲಿಂಗ. ಕಣ್ಣಮನಕೆ ತೆರವು ಕೊಟ್ಟು ನನ್ನ ಕಾಯೊ ಬಸವಲಿಂಗ | ಸೆರಗನೊಡ್ಡಿ ಬೇಡಿಕೊಂಬೆ ಕರುಣಿಸಯ್ಯ ಬಸವಲಿಂಗ | ಊನವಿರದ ತೆರೆದ ಸಮಾಧಾನ ಮಾಡೂ ಬಸವಲಿಂಗ. ಅಭಯವಿತ್ತು ಎನ್ನ ಇಷ್ಟ ಆಲಿಸಯ್ಯ ಬಸವಲಿಂಗ. ಅಭವ ನಿನ್ನ ಹೊರತು ಕಾಯ್ವೊರಾರೂ ಕಾಣಿ ಬಸವಲಿಂಗ | ಅಕ್ಕರಾದಿಗಳಿಗೆ ಇನ್ನವದೆಸೆಯುಂಟಿ ಬಸವಲಿಂಗ | ಬೇಡ ಪರರ ಒಲುಮೆ ನಿನ್ನ ಬೇಡಿಕೊಂಬೆ ಬಸವಲಿಂಗ | -ಆಂಧ್ರದ ಕವಿ ಪಾಲ್ಕುರಿಕೆ ಸೋಮನಾಥನ (13 ಶ.) ಕನ್ನಡ ''ಬಸವಲಿಂಗ ನಾಮಾವಳಿ'’ ಕೃತಿಯಿಂದ 'ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆ ಕೇಳ್ | ಬಸವನ ರೀತಿ ರೀತಿ ಬಸವಣ್ಣನ ಕಿಂಕರ ವೃತ್ತಿ ವೃತ್ತಿ ಮೇಣ್ | ಬಸವನ ಬಟ್ಟೆ ಬಟ್ಟೆ ಬಸವಣ್ಣನ ಅಂಕದ ಭಾಷೆ ಭಾಷೆ ಹೋ ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೆ ನೇಮವುರ್ವಿಯೊಳ್|
©2024 Book Brahma Private Limited.