‘ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ’ ಜೆ.ಎಂ.ನಾಗಯ್ಯ ಅವರ ಸಂಶೋಧನತ್ಮಕ ಕೃತಿಯಾಗಿದೆ. ಬಳ್ಳಾರಿಯ ಪ್ರಾಚೀನ ಶಾಸನಗಳ ಬಗೆಗಿನ ಇತಿಹಾಸವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಭೂಮಿಯ ಮೇಲೆ ಎಸ್ ಸ್ ಜ್ ಹವಣಿಸುವ ಮಾನವನ ಇಂದಿನ ವರ್ತನೆಯೇ ಹಿಂದೆಯೂ ಇತ್ತೆಂಬುದನ್ನು ತಿಳಿಸುತ್ತದೆ.
ಹೊಸತು ಜುಲೈ- 2002
ಇಂದಿನ ಬಳ್ಳಾರಿ ಜಿಲ್ಲೆಯ ಪ್ರಾಚೀನ ಶಾಸನಗಳ ವಿವರ, ಚಕ್ರ ವರ್ತಿಯ ಛತ್ರದಡಿ ''ಪಾದ ಪದ್ಮಪಜೀವಿ''ಯಾಗಿದ್ದರೂ ಪರಸ್ಪರ ದಂಡೆತ್ತಿ ಕಾದಾಡಿ ಮಡಿದು ತನ್ಮೂಲಕ ವೀರ-ಶೂರರೆಂದು ತಾಮ್ರ ಶಾಸನ- ಶಿಲಾಶಾಸನಗಳಲ್ಲಿ ಕರೆಸಿಕೊಂಡ ರಾಜ-ಸಾಮಂತ ನಾಡಪ್ರಭು ಮುಂತಾದವರ ಬಗ್ಗೆ ಬೆಳಕು ಚೆಲ್ಲುವಂಥ ಕೃತಿ. ಭೂಮಿಯ ಮೇಲೆ ಸಾರ್ವಭೌಮನಾಗಲು ಹವಣಿಸುವ ಮಾನವನ ಇಂದಿನ ವರ್ತನೆಯೇ ಹಿಂದೆಯೂ ಇತ್ತೆಂಬುದನ್ನು ತಿಳಿಸುತ್ತದೆ.
©2024 Book Brahma Private Limited.