ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ಅನೇಕ ಪುಣ್ಯಜೀವಿಗಳಲ್ಲಿ ಬಾಲಗಂಗಾಧರ ತಿಲಕರು ಪ್ರಮುಖರಾದವರು. ತಿಲಕರು ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಎಂದು, ಹೋರಾಟದಲ್ಲಿ ತಮ್ಮ ವೈಯಕ್ತಿಕ ಜೀವದಲ್ಲಿ ಕಷ್ಟಗಳ ಸುರಿಮಳೆಯನ್ನೇ ಆಹ್ವಾನಿಸಿಕೊಂಡವರು. ಅವರ ಹೃದಯದ ಶ್ರದ್ಧೆ ದೇಶ ಭಕ್ತಿಗಷ್ಟೇ ಸೀಮಿತವಾಗಿಸದೆ ಉತ್ತಮ ಪ್ರಪಂಚವನ್ನು ನಿರ್ಮಿಸಲು ದುಡಿಯಿತು. ಶಾಲೆ, ಕಾಲೇಜುಗಳನ್ನು ಕಟ್ಟಿ ಆದರ್ಶ ವಿದ್ಯಾಸಂಸ್ಥೆಗಳನ್ನಾಗಿ ಮಾಡಿದರು. ಕ್ಷಾಮ ಪರಿಹಾರ ಕಾರ್ಯಗಳಲ್ಲಿ ತಾವು ಶೇ. 80ರಷ್ಟು ನಷ್ಟವನ್ನು ಅನುಭವಿಸಿ ನೂಲನ್ನು ನೇಕಾರರಿಗೆ ಒದಗಿಸಿದರು. ಧಾರ್ಮಿಕ ಆಚರಣೆಗಳನ್ನು ದೇಶ ಕಟ್ಟುವ ಕೆಲಸಕ್ಕಾಗಿ ಬಳಸಿಕೊಂಡರು. ಪಾನ ನಿರೋಧಕ್ಕಾಗಿ ಹೋರಾಡಿದರು. ಭಾರತದ ಹೊಸ ಹುಟ್ಟಿನ ರಾಷ್ಟ್ರೀಯತೆಯ ಸ್ಫೂರ್ತಿ ಮತ್ತು ಪ್ರತಿನಿಧಿಗಳಾಗಿದ್ದರು ಈ ಎಲ್ಲಾ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಎಸ್. ಅನಂತನಾರಾಯಣ ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ. ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...
READ MORE