ವ್ಯಂಗ್ಯಚಿತ್ರಕಾರ ಬಿ.ವಿ. ರಾಮಮೂರ್ತಿ ಅವರ ಜೀವನ ಮತ್ತು ವ್ಯಕ್ತಿತ್ವದ ಚಿತ್ರಣವನ್ನು ಅಧ್ಯಯನ ಶೀಲ ಮನೋಭೂಮಿಕೆಯಲ್ಲಿ ನೀಡುವ ಕೃತಿ ಇದು. ರಾಮಮೂರ್ತಿ ಅವರ ವ್ಯಂಗ್ಯಚಿತ್ರಗಳು ಮತ್ತು ಸಾಧನೆಯನ್ನು ವಿವರಿಸಲಾಗಿದೆ. ರಾಮಮೂರ್ತಿಯವರ ಕಲಾಸೃಷ್ಟಿಯ ಪ್ರೇರಣೆಗಳ, ನೆಲೆಗಳನ್ನು ಅರಿಯುವಲ್ಲಿ ಈ ಕೃತಿ ಸಹಕಾರಿಯಾಗುತ್ತದೆ.
ಎಸ್.ವೆಂಕಟೇಶ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ (ಇತಿಹಾಸ) ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್. ಮತ್ತು ಪಿಎಚ್.ಡಿ. ಪದವೀಧರರು. ನಾಲೈದು ವರ್ಷ ಕಾಲ ಉಪನ್ಯಾಸಕರಾಗಿದ್ದರು. ಭಿತ್ತಿಚಿತ್ರಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆಯ 'ಕರ್ನಾಟಕ ಕಲಾವಾರ್ತೆ' (2002-2004) ಉಪಸಂಪಾದಕರಾಗಿದ್ದರು. 'ಮೈಸೂರು ಅರಮನೆ ಕಲಾವಿದ ಕೆ.ಕೇಶವಯ್ಯ' ಕುರಿತು ಪುಸ್ತಕ ರಚಿಸಿದ್ದಾರೆ. 'ಗಾಜಿನ ಚಿತ್ರಕಲೆ'ಯ ಇತಿಹಾಸ ಕುರಿತೂ ಅವರು ಅಧ್ಯಯನಾಸಕ್ತರು. ...
READ MORE