‘ಬಿ. ಶ್ರೀ ಪಾಂಡುರಂಗರಾವ್’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಮಕ್ಕಳ ಸಾಹಿತ್ಯದ ಹಿರಿಯ ಲೇಖಕರಾಗಿದ್ದ ಪಾಂಡುರಂಗರಾವ್ ಅವರ ಬದುಕು ಬರಹದ ಕುರಿತು ಲೇಖಕ ಬೆ.ಗೋ. ರಮೇಶ್ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಕುರಿತು ಬರೆಯುತ್ತಾ ‘2017ರ ಜನವರಿ ತಿಂಗಳಲ್ಲಿ ಒಂದು ದಿನ ದೂರದ ಗುಲ್ಬರ್ಗದಿಂದ ನನ್ನ ಬಹುಕಾಲದ ಹಿರಿಯ ಮಿತ್ರರೂ, ಹಿರಿಯ ಮಕ್ಕಳ ಸಾಹಿತಿಗಳೂ ಆದ ಶ್ರೀ ಎ.ಕೆ. ರಾಮೇಶ್ವರ ಅವರು ಮಕ್ಕಳ ಸಾಹಿತಿಗಳ ಕುರಿತು ಪುಸ್ತಕಗಳನ್ನು ಹೊರ ತರಲಾಗುತ್ತಿದೆ. ತಾವು ಮಕ್ಕಳ ಸಾಹಿತ್ಯ ರಚಿಸಿದ. ಶ್ರೀ ಬಿ.ಶ್ರೀ. ಪಾಂಡುರಂಗರಾವ್‌ರನ್ನು ಕುರಿತು ಒಂದು ಪುಸ್ತಕ ರಚಿಸಿ ಕೊಡುವಿರಾ ಎಂದು ಫೋನ್ ಮಾಡಿ ಕೇಳಿದಾಗ ಅದು ನನಗೆ ಪ್ರಿಯವಾದ ವಿಷಯ ಎಂದು ಕೂಡಲೇ ಒಪ್ಪಿದೆ. ತೀರ್ಥರೂಪ ಸಮಾನರಾಗಿದ್ದ ಪಾಂಡುರಂಗರಾವ್ ರವರೊಂದಿಗೆ ಸುಮಾರು ಇಪ್ಪತ್ತೈದು ವರ್ಷಗಳ ಒಡನಾಟವಿದ್ದ ನಾನು - ಗಮಕಿಯಾಗಿ ಅವರ ಪತ್ನಿ ಶ್ರೀಮತಿ ಶಕುಂತಲಾ ಬಾಯಿಯವರನ್ನು ಬಲ್ಲವನಿದ್ದೆ. ಆದರ್ಶ ದಂಪತಿಗಳಾಗಿದ್ದ ಇವರ ಮತ್ತು ಇವರ ಕುಟುಂಬದ ಪರಿಚಯವೂ - ಇತ್ತು.
ಕೆಲವು ದಿನಗಳಲ್ಲಿ ಮಕ್ಕಳ ಸಾಹಿತಿಗಳ ಕುರಿತು ಪುಸ್ತಕಗಳ ಪ್ರಕಟಿಸಲು ಮುಂದಾಗಿದ್ದ ಸಿವಿಜಿ ಪಬ್ಲಿಕೇಷನ್ಸ್ ಮಾಲೀಕರಾದ ಶ್ರೀ ಸಿವಿಜಿ ಚಂದ್ರುರವರ ಪತ್ರವೂ ಕೈ ಸೇರಿತು. ಪಾಂಡುರಂಗರಾಯರ ಬಗೆಗೆ ಬರೆಯತೊಡಗಿದಂತೆ ನನ್ನ ಬಳಿ ಇದ್ದ ಅವರ ಏಳೆಂಟು ಪುಸ್ತಕಗಳು ಸಾಲದಾದವು ಎನ್ನುತ್ತಾರೆ. ಮಕ್ಕಳಿಗೆ ಸಾಹಿತ್ಯದ ಕುರಿತು ಮತ್ತು ಮಕ್ಕಳ ಸಾಹಿತ್ಯದ ಕುರಿತು ಅರಿವು ಮೂಡಿಸುವ ಸಲುವಾಗಿ ಸಿವಿಜಿ ಪಬ್ಲಿಕೇಷನ್ಸ್ ಇಂತಹ ಮಹನೀಯರ ಕುರಿತಾದ ಪುಸ್ತಕಗಳನ್ನು ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯನ್ನು ಪ್ರಕಟಿಸಿತು. ಆ ಮಾಲಿಕೆಯಲ್ಲಿ ಪ್ರಕಟವಾದ ಕೃತಿಯಿದು.
©2024 Book Brahma Private Limited.