ಬಿ. ರಂಗನಾಯಕಮ್ಮ ಸಂಶೋಧನೆ ಮಾಡಿ ಪ್ರಥಮ ಮಹಿಳಾ ಏರೋನಾಟಿಕಲ್ ಇಂಜಿನಿಯರ್ ಎಂಬ ಕೀರ್ತಿಗೆ ಭಾಜನರಾದವರು. ಕಳೆದ ಶತಮಾನದ 60ರ ದಶಕ, ಮೈಸೂರಿನ ಯುವತಿಯೊಬ್ಬಳು ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಬಂದಾಗ ಇಡೀ ಕಾಲೇಜು ಅಚ್ಚರಿಯಿಂದ ನೋಡಿತ್ತು. ಅವರ ಜೀವನ ಸಾಧನೆಯನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ. ಒಬ್ಬ ಮಹಿಳೆ ಸಾಧಿಸಿದರೆ ಯಾವ ಎತ್ತರಕ್ಕೂ ಏರಬಲ್ಲಳು ಎನ್ನುವುದನ್ನು ಕಥನ ರೂಪದಲ್ಲಿ ನಿರೂಪಿಸುತ್ತದೆ. ಒಬ್ಬ ಮಹಿಳೆ ಉನ್ನತ ವಿದ್ಯಾಭ್ಯಾಸ ಕಲಿಯುವುದೇ ವಿಶೇಷ ಎನ್ನುವಂತಹ ಸಂದರ್ಭ ದಲ್ಲಿ, ಆಕೆ ಎಂಜಿಯರ್ ಕಲಿತು, ಪ್ರತಿವರ್ಷವೂ ಪ್ರಥಮ ಸ್ಥಾನ ಪಡೆದು, ಅಂತಿಮ ವರ್ಷದಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿರುವುದು ಒಂದು ಐತಿಹಾಸಿಕ ವಿಷಯವೇ ಸರಿ. ಆಕೆಯ ಬಾಲ್ಯ, ಅವರ ಕಲಿಯುವಿಕೆ ಹಂತದಲ್ಲಿ ಸ್ಫೂರ್ತಿಯಾದ ವ್ಯಕ್ತಿ ಗಳು, ಇಂಜಿಯರ್ ಕಾಲೇಜು ಸೇರಲು ಕಾರಣರಾದವರ ಕುರಿತಂತೆಯೂ ಈ ಕೃತಿಯಲ್ಲಿ ವಿವರಗಳನ್ನು ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರ ಸಾಧನೆ, ಈ ಸಂದರ್ಭದಲ್ಲಿ ಇವರು ಎದುರಿಸಿದ ಸವಾಲುಗಳನ್ನೂ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಬರಹಗಾರ್ತಿ ಮಯೂರ ಬಿ.ಎಸ್ ಅವರು 1936 ಅಕ್ಟೋಬರ್ 05 ಮೈಸೂರಿನಲ್ಲಿ ಜನಿಸಿದರು. ’ಶಬ್ದಶಾಸ್ತ್ರ’ ಎಂಬ ಪಠ್ಯಪುಸ್ತಕ, ’ಸರ್ ಐಸಾಕ್ ನ್ಯೂಟನ್, ಅಲ್ಬರ್ಟ್ ಅಬ್ರಾಹಂ ಮೈಕೆಲ್ಸನ್, ಥಾಮಸ್ ಅಲ್ವ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಫಿಗ್ಗೆ ಮೋರ್, ಆಲ್‌ಫ್ರೆಡ್ ನೊಬೆಲ್ ಪರಸ್ತೃತನ ವ್ಯಕ್ತಿಚಿತ್ರಗಳನ್ನು ರಚಿಸಿದ್ಧಾರೆ. ...
READ MORE