ಡಾ.ಬಿ.ಪಿ. ರಾಧಾಕೃಷ್ಣ

Author : ಟಿ.ಎಂ. ಶಿವಶಂಕರ್‌

Pages 96

₹ 60.00




Year of Publication: 2014
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಡಾ.ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ  ಸೆಂಟ್ರಲ್ ಕಾಲೇಜಿನಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಜಿಯಾಲಜಿಕಲ್ ಸೊಸೈಟಿಯನ್ನು ಕಟ್ಟಿ ಬೆಳೆಸಿದ ಇವರು ಮೈಸೂರು ಖನಿಜ ನಿಗಮದ ಮುಖ್ಯಸ್ಥರಾಗಿ, ಕರ್ನಾಟಕ ಸರ್ಕಾರದ ಅಂತರ್ಜಲ ಸಂಪನ್ಮೂಲಗಳ ಅಭಿವೃದ್ಧಿ ಸಲಹೆಗಾರರಾಗಿಯೂ ಅವರು ಕಾರ್ಯ ನಿರ್ವಹಸಿದ್ದಾರೆ. ’ಕರ್ನಾಟಕದ ಖನಿಜ ಸಂಪತ್ತು, ಅಂತರ್ಜಲ’ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಡಾರ್ವಿನ್’,  ’ಮೇಡಮ್ ಕ್ಯೂರಿ’ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಿನರಲ್ ರಿಸೋರ್ಸಸ್ ಆಫ್ ಕರ್ನಾಟಕ ಇಂಗ್ಲಿಷಿನಲ್ಲಿ ರಚಿಸಿರುವ ಅತ್ಯಂತ ಮಹತ್ವದ ಕೃತಿ. ಇವರ ಮತ್ತೊಂದು ಪ್ರಮುಖ ಕೃತಿಯೆಂದರೆ  ತಮ್ಮ ತಂದೆಯವರಾದ ಬಿ. ಪುಟ್ಟಯ್ಯನವರನ್ನು ಕುರಿತು ಬರೆದ ಗ್ರಂಥ ‘ನನ್ನ ತಂದೆ’. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1974), ಭಾರತ ಸರಕಾರದ ‘ಪದ್ಮಶ್ರೀ’, ಸಾಹಿತ್ಯ ಸೇವೆಗಾಗಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ ಲಭಿಸಿದೆ.  ’ಡಾ.ಸಿ.ವಿ. ರಾಮನ್ ಮತ್ತು ಡಾರ್ವಿನ” ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪುರಸ್ಕೃತರಾಗಿದ್ದಾರೆ. ಲೇಖಕ ಟಿ.ಎಂ. ಶಿವಶಂಕರ್‌ ಅವರು ರಾಧಾಕೃಷ್ಣರನ್ನು ಪ್ರಸ್ತುತ ಕೃತಿ ಮೂಲಕ ಪರಿಚಯಿಸಿದ್ದಾರೆ.   

About the Author

ಟಿ.ಎಂ. ಶಿವಶಂಕರ್‌

ಟಿ.ಎಂ. ಶಿವಶಂಕರ್ ಅವರು ಬಿ.ಎಸ್ಸಿ. ಪದವೀಧರರಾಗಿದ್ದು, ಮಾನಸಗಂಗೋತ್ರಿಯಲ್ಲಿಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಹಾಯಕ ವಿಜ್ಞಾನಿಯಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಭೂವಿಜ್ಞಾನಿಯಾಗಿ ನಿವೃತ್ತರಾಗಿದ್ದಾರೆ. ತಮ್ಮ ಇಡೀ ಸೇವಾವಧಿಯನ್ನು ಅಂತರ್ಜಲ ಶೋಧನಾ ವಿಭಾಗದಲ್ಲಿಯೇ ಕಳೆದು, ಅಂತರ್ಜಲದ ಬಗ್ಗೆ ವಿಶೇಷ ಜ್ಞಾನ ಪಡೆದಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ  ಸ್ನಾತಕೋತ್ತರ ಪದವಿ ಪಡೆದು ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಬಹಳಷ್ಟು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...

READ MORE

Related Books