ಅರ್ನೆಸ್ಟ್ ರುದರ್ಫರ್ಡ್ ಪರಮಾಣುವಿನ ಅಂತರ್ ರಚನೆಯ ಪರಿಕಲ್ಪನೆಯನ್ನು ಕೊಟ್ಟ ಪ್ರಮುಖರು. ವಿಕಿರಣಶೀಲತೆ, ವಿಘಟಿತ ಅದರ ಕುರಿತು ಅವರು ನೀಡಿದ ಕೊಡುಗೆ , ಮೂಲ ವಸ್ತುಗಳ ಪರಿವರ್ತನೆ, ರುದರಫರ್ಡ್ ಅವರ ಒಟ್ಟು ಬದುಕಿನ ಬಗ್ಗೆ ಲೇಖಕ ಪ್ರೊ. ಎಂ.ಎಸ್.ಕೊಟ್ಲಿಯವರು ಈ ಕೃತಿಯಲ್ಲಿ ಮಾಹಿತಿಯನ್ನ ಒದಗಿಸಿದ್ದಾರೆ. ಅಲ್ಪಾ ಕಣವು ಹೀಲಿಯಂ ನ್ಯೂಕ್ಲಿಯಸ್ ಎಂದು ಹೇಳಿದ ಶ್ರೇಯಸ್ಸು ಈತನಿಗೆ ಸಲ್ಲುತ್ತದೆ. ಕೇಂಬ್ರಿಡ್ಜ್ ವಿವಿಗಳ ಸತತ ಎರಡು ತಲೆಮಾರಿನ ವಿಜ್ಞಾನಿಗಳಾದ ಮ್ಯಾಗ್ ಹಿಲ್, ಮಾಂಚಿಸ್ಟ್ರರ್ ಕೇಂಬ್ರಿಡ್ಜ್ ಇವರಿಗೆ ಮಾದರಿಯಾದ ಇವರ ಬದುಕಿನ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಹಲವರ ಬದುಕಿಗೆ ಸ್ಪೂರ್ತಿಯಾದ ಇವರ ಒಟ್ಟು ವಿಜ್ಞಾನದ ಸಾಧನೆ, ಸಂಘರ್ಷ ಈ ಎಲ್ಲಾ ಸಂಗತಿಗಳ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಪರಮಾಣು ಭೌತಶಾಸ್ತ್ರದ ಪಿತಾಮಹ ಎಂದು ಪ್ರಸಿದ್ದಿ ಹೊಂದಿದ ಅರ್ನೆಸ್ಟ್ ರುದರ್ ಫೋರ್ಡ್ ನ ಜೀವನ ಸಾಧನೆ, ಸಂಶೋಧನೆ, ಜೀವನ ಚಿತ್ರಣವನ್ನು ಶಿಕ್ಷಕ, ಲೇಖಕರಾದ ಎಂ.ಎಸ್. ಕೊಟ್ಲಿ ಅವರು ನೀಡಿದ್ದಾರೆ. ಮ್ಯಾಗ್ಹಿಲ್, ಮಾಂಚಿಸ್ಟರ್ ಕೇಂಬ್ರಿಡ್ಜ್ ವಿವಿಗಳ ಎರಡು ತಲೆಮಾರಿನ ವಿಜ್ಞಾನಿಗಳ ಸ್ಫೂರ್ತಿಗೆ ಕಾರಣೀಭೂತನಾದ ಈತನ ಬದುಕು, ವೈಜ್ಞಾನಿಕ ಸಾಧನೆ, ಸಂಘರ್ಷಗಳನ್ನು ಲೇಖಕ ಕೊಟ್ಲಿಯವರು ಸಮಗ್ರವಾಗಿ ವಿವರಿಸಿದ್ದಾರೆ. ...
READ MORE