ಅರಸು ಮತ್ತು ರಾಜಕೀಯ

Author : ದಿನೇಶ್ ಅಮಿನ್ ಮಟ್ಟು

Pages 146

₹ 70.00




Year of Publication: 2016
Published by: ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ
Address: ದೇವರಾಜ ಅರಸು ಭವನ, ಮೂರನೇ ಮಹಡಿ, ಮಿಲ್ಲರ್‍ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052

Synopsys

ಅರಸು ಒಬ್ಬ ಸಾಮಾನ್ಯ ರಾಜಕಾರಣಿಯಾಗಿರಲಿಲ್ಲ, ಅವರಲೊಬ್ಬ  ಸಮಾನತೆಯ ಕನಸು ಕಾಣುವ ಸಮಾಜ ಸುಧಾರಕನಿದ್ದ. ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕವೆಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದು, ಸಾಹಿತಿ ಕಲಾವಿದರಿಗೆ ಮಾಸಾಶನ, ಅಕಾಡೆಮಿಗಳ ರಚನೆ-ಹೀಗೆ ಸಾಂಸ್ಕೃತಿಕವಾಗಿ ಸಹ, ಅರಸು ಕ್ರಮಗಳು ಅಂದಿನ ಮಟ್ಟಿಗೆ ವಿನೂತನವೆನಿಸಿದವು ಅರಸು ಅವರಿಗೆ ರಾಜಕೀಯ ಎನ್ನುವುದು ಗುರಿಯಾಗಿರಲಿಲ್ಲ, ತನ್ನ ಯೋಚನೆ-ಯೋಜನೆಗಳನ್ನು ಅನುಷ್ಠಾನಗೊಳಿಸುವ ಮಾರ್ಗವಾಗಿತ್ತು. ಅರಸು ಕೇವಲ ಶಕ್ತಿ ರಾಜಕಾರಣವನ್ನು ಉದ್ದೇಶವಾಗಿಟ್ಟುಕೊಂಡ ಒಬ್ಬ ನಾಯಕನಾಗಿರಲಿಲ್ಲ ಅವರಲೊಬ್ಬ ದಾರ್ಶನಿಕ ಇದ್ದ. ಅವರಿಗೆ ನಿಕರವಾದ ರಾಜಕೀಯ ಮತ್ತು ಸಾಮಾಜಿಕ ಮುನ್ನೋಟಗಳಿದ್ದವು. ರಾಜಕೀಯ ಅಧಿಕಾರ ಯಾಕೆ ಮತ್ತು ಅದರ ಮೂಲಕ ತಾವು ಮಾಡಬೇಕಾಗಿರುವುದು ಏನು ಎಂಬ ಬಗ್ಗೆ ಅವರಿಗೆ ಸ್ಪಷ್ಟಕಲ್ಪನೆಗಳಿದ್ದವು. ಹೀಗೆ ಅರಸು ಮತ್ತು ರಾಜಕೀಯದ ನಡುವೆ ಇದ್ದ ನಂಟನ್ನು ಕೃತಿ ತೆರೆದಿಡುತ್ತದೆ.

About the Author

ದಿನೇಶ್ ಅಮಿನ್ ಮಟ್ಟು

ಪತ್ರಕರ್ತ, ಬರಹಗಾರ, ಸಾಮಾಜಿಕ ಚಿಂತಕ ದಿನೇಶ್‌ ಅಮೀನ್‌ ಮಟ್ಟು ಅವರು ಅವರ ಪ್ರಖರ ಲೇಖನಗಳ ಮೂಲಕವೇ ಪರಿಚಿತರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಅಂಕಣಕಾರರಾಗಿ ಕೆಲಸ ಮಾಡಿರುವ ಇವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಬರೆದ ಕೃತಿಯೆಂದರೆ ಪ್ರಜಾವಾಣಿಯಲ್ಲಿ ದೆಹಲಿ ನೋಟ ಅಂಕಣದಲ್ಲಿ ಪ್ರಕಟಗೊಂಡ ಲೇಖನಗಳ ಸಂಕಲಿತ ರೂಪ ದೆಹಲಿ ನೋಟ. ...

READ MORE

Related Books