ಅಪರೂಪದ ಕನ್ನಡ ಮೇಷ್ಟ್ರು

Author : ಈರಣ್ಣ ಬೆಂಗಾಲಿ

Pages 114

₹ 200.00




Year of Publication: 2021
Published by: ಕೃಷ್ಣಾರುಣ ಪ್ರಕಾಶನ
Address: 5-9-23, ನೇತಾಜಿ ನಗರ, ರಾಯಚೂರು-584103,
Phone: 9986724198

Synopsys

ಈರಣ್ಣ ಬೆಂಗಾಲಿ ಅವರ ’ಅಪರೂಪದ ಕನ್ನಡ ಮೇಷ್ಟ್ರು’ಸೈಯ್ಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರ ವ್ಯಕ್ತಿತ್ವದ ಕುರಿತ ಚಿತ್ರಣವಾಗಿದೆ. ಬೆನ್ನುಡಿಯಲ್ಲಿ ಮಲ್ದಾರಿಗೌಡ ಎಸ್, ಪಾಟೀಲ ಅವರು, ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ವಿಷಯ ಬೋಧಕರಾಗಿದ್ದಾಗ ತಾವು ಮಕ್ಕಳಿಗೆ ಕನ್ನಡ ಕಲಿಕೆಯಲ್ಲಿ ವಿನೂತನ ಕರ್ತೃ ಎನಿಸಿಕೊಂಡು ಇಡಿ ಆಯುಷ್ಯ ತುಂಬ ಶೈಕ್ಷಣಿಕ ಹಾಗೂ ಇನ್ನುಳಿದ ರಂಗಗಳಲ್ಲಿ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಸಮಾಜದ ಎಲ್ಲ ಘಟಕಗಳಿಗೆ ಅಭಿಮಾನದ ವ್ಯಕ್ತಿಯಾಗಿ, ಅವರದೆಯಾದಂತಹ ಪಾಠೋಪಕರಣಗಳ ಮೂಲಕ ವಿದ್ಯಾರ್ಥಿಗಳಿಗೆ ವಿಷಯವನ್ನು ಸರಳವಾಗಿ ತಿಳಿಸಿ ಮಕ್ಕಳ ಫಲಿತಾಂಶ ಉತ್ತಮ, ರೀತಿಯಲ್ಲಿ ಆಗುವಂತೆ ಶ್ರಮವಹಿಸುತ್ತಾರೆ. ಇವರ ಬೋಧನಾ ಪದ್ಧತಿ ಸರಳತೆಯಿಂದ ಕಠಿಣತೆಯೆಡೆಗೆ ಸಾಗಿ ವಿದ್ಯಾರ್ಥಿಗಳಿಗೆ ವಿಷಯವನ್ನು ಮನದಟ್ಟು ಮಾಡುವ ಪದ್ದತಿಯನ್ನು ಗುಣಗಾನ ಮಾಡುವುದಕ್ಕಿಂತ ಪ್ರತಿಯೊಬ್ಬ ಶಿಕ್ಷಕರು ಈ ಅಂಶಗಳನ್ನು ಅಳವಡಿಸಿಕೊಳ್ಳುವುದು ತಮ್ಮ ಆದ್ಯ ಕರ್ತವ್ಯವೆಂದು ತಿಳಿಯಬೇಕೆಂದು ಎನ್ನುತ್ತಾರೆ.

About the Author

ಈರಣ್ಣ ಬೆಂಗಾಲಿ

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...

READ MORE

Related Books