ಅಲೆಮಾರಿ ಪ್ರವಾದಿ

Author : ಪ್ರಧಾನ್ ಗುರುದತ್ತ

Pages 300

₹ 175.00




Year of Publication: 2001
Published by: ನ್ಯಾಷನಲ್ ಬುಕ್ ಟ್ರಸ್ಟ್. ಇಂಡಿಯಾ
Address: ಎ-5, ಗ್ರೀನ್ ಪಾರ್ಕ್, ನವದೆಹಲಿ. 110016.

Synopsys

ಬಂಗಾಳಿ ಭಾಷೆಯ ಪ್ರಸಿದ್ಧ ಲೇಖಕ, ಸೋಲರಿಯದ ಕಥಾಶಿಲ್ಪಿ ಶರತ್‌ಚಂದ್ರರ ಜೀವನ ಚರಿತ್ರೆಯಿದು. ತುಂಬ ಜಟಿಲ ಸ್ವಭಾವದವರಾದ ಅವರ ವ್ಯಕ್ತಿತ್ವವನ್ನು ಇಲ್ಲಿ ಚಿತ್ರಿಸಲಾಗಿದೆ. ಅವರ ಸಾಹಿತ್ಯ ಮಹತ್ತರವಾದ್ದು. ಆದರ ಜೊತೆಗೆ ಜೀವನ ಅದಕ್ಕಿಂತಲೂ ಕಡಿಮೆ ಮಹತ್ವದ್ದೇನೂ ಅಲ್ಲ. ಕವಿ ರವೀಂದ್ರನಾಥ ಠಾಕೂರರ ಸಮಕಾಲೀನರಾದ ಶರತ್‌ಚಂದ್ರರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ನೆರವಾಗುತ್ತದೆ. ಹಿಂದಿ ಭಾಷೆಯ ಪ್ರಮುಖ ಲೇಖಕ ವಿಷ್ಣು ಪ್ರಭಾಕರ್ (1912) ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಲೇಖಕ, ಅನುವಾದಕ ಡಾ. ಪ್ರಧಾನ್ ಗುರುದತ್ತ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಪ್ರಧಾನ್ ಗುರುದತ್ತ
(30 May 1938)

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...

READ MORE

Related Books