ನೀಲತ್ತಹಳ್ಳಿ ಕಸ್ತೂರಿ ಅವರು ರಾಜರತ್ನಂ ಸಂಗಡಿಗರಾಗಿ ನೆರೆಯಲ್ಲೇ ನಿಂತು ನಲಿದವರು. ಅವರ ಹೃದಯ ಗ್ರಂಥವನ್ನು ಪುಟಪುಟ ಪಂಕ್ತಿ ವೆಂಕ್ತಿ, ವರೀ ಪುಟಗೊಂಡವರು ವರ ಕವಿತನ, ಕಲಿತನ, ಕಣ್ಣೀರು, ಪನ್ನೀರು, ವುಟ್ಟತನ, ದಿಟ್ಟತನಗಳನ್ನು ಹತ್ತಿರದಿಂದ ಅನುಭವಿಸಿ ಅರಿತವರು.
ಜಿ.ಪಿ. ಅವರ ನಡೆನುಡಿಗಳ ಪದಪದದಲ್ಲೂ ತೊಳಗುವ ರತ್ನ ಪ್ರಭಾವಳಿಯನ್ನು ನೀಲತ್ತಹಳ್ಳಿ ಕಸ್ತೂರಿಯವರು ತಮ್ಮದೇ ಆಕರ್ಷಕ ಆದರಣೀಯ, ಅನಾಹಂಟರ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಇದು ಗುರುತರ ಕೈಂಕರ್ಯ, ಚಿರಕಾಲ ಕನ್ನಡ ಜನಮನವನ್ನು ಅರಳಿಸುವ ಉತ್ತಮ ಗದ್ಯಕಾವ್ಯ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE