ಬನ್ನೂರು ಗ್ರಾಮದ ಕೋರೆಯವರಾದ ಡಾ.ರಮೇಶ ಆಚಾರ್ಯ(ಜನನ 1968) ಅವರು ಉಪನ್ಯಾಸಕರಾಗಿ, ಕಾಪು, ಹಾಸನ ಜಿಲ್ಲೆಯ ಕೊಣನೂರು, ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಬಾರ್ಕೂರಿನ ರುಕ್ಕಿಣಿ ಶೆಡ್ಡಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಜೈನಕವಿ ನಯಸೇನನ 'ಧರ್ಮಾಮೃತ' ದಲ್ಲಿ ಸಾಮಾಜಿಕ, ಆರ್ಥಿಕ, ಚಾರಿತ್ರಿಕ, ಧಾರ್ಮಿಕ ವಿಚಾರಗಳು' ಎಂಬ ಸಂಪ್ರಬಂಧಕ್ಕಾಗಿ ಅವರಿಗೆ ಪಿಎಚ್.ಡಿ. ಪದವಿ ಪ್ರಾಪ್ತವಾಗಿದೆ. 'ನಯಸೇನನ ಧರ್ಮಾಮೃತ-ಪರಿಕಲ್ಪನಾತ್ಮಕ ನಿರ್ವಚನ.' ಕೃತಿ ಪ್ರಕಟವಾಗಿದೆ. 'ಪಂಪಭಾರತ-ಮೂರು ಉಪನ್ಯಾಸಗಳು', ಕನ್ನಡ ಸಾಹಿತ್ಯಚರಿತ್ರೆ-ಕೆಲವು ಟಿಪ್ಪಣಿಗಳು, 'ವೇದ ಸುಳ್ಳಾದರೂ....' ಎಂಬ ಮೂರು ಕೃತಿಗಳಿಗೆ ಸಹಲೇಖಕರು. ಸಾಹಿತ್ಯ ಮತ್ತು ಜಾನಪದ ಸಂಬಂಧದ ಕೆಲವು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟನೆಗೊಂಡಿವೆ.