ಡಾ. ಆರ್.ವಿ. ರವೀಂದ್ರನಾಥ, ಕೋಲಾರನಗರ ಕಠಾರಿಪಾಳ್ಯದ ಎ. ಶಾಂತಮ್ಮ ಹಾಗೂ ಆರ್. ವೆಂಕಟಾಚಲಪತಿಯವರ ಮಗ.
ಇತಿಹಾಸದಲ್ಲಿ MA., M.Phil.,PGDACT. PGDI, PGDEpi., Ph.D.,ಪದವಿ ಪಡೆದಿರುವ ಅವರು ಕರ್ನಾಟಕ, ಬೆಂಗಳೂರು, ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಪಡೆದು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಧೀಮಂತ ರಾಜತಂತ್ರಜ್ಞ, ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರನ್ನು ಕುರಿತ, ಮಹಾನ್ ಸಾಧಕ ಕೆ.ಸಿ. ರೆಡ್ಡಿ ಕೃತಿ ರಚಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಿದ್ವತ್ತೂರ್ಣ ಭಾಷಣಗಳನ್ನು ಮಾಡಿದ್ದಾರೆ, ಹಲವಾರು ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.