ಡಾ.ವೈ.ಸಿ. ಕಮಲ ಡಾ. ವೈ.ಸಿ. ಕಮಲ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ತುಮಕೂರಿನ ನಾಗವಲ್ಲಿಯಲ್ಲಿ 1967 ಮಾರ್ಚ್ 1 ರಂದು ಜನಿಸಿದರು. ಇದರ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ-ಒಂದು ವಿಶ್ಲೇಷಣೆ' ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ದೇಶದ ಆಕಾಶವಾಣಿ ಅರ್‍ಕೈವ್ಸ್‌ಗಾಗಿ ಜಾನಪದ ವೃತ್ತಿ ಗಾಯಕರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನೇಕ ರೂಪ ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ಇವರು ಕನ್ನಡದಲ್ಲಿ ವಾರ್ತಾ ವಾಚಕಿಯಾಗಿ ಸೇವೆಸಲ್ಲಿಸಿದ್ದು ಬೆಂಗಳೂರಿನ ಆಕಾಶವಾಣಿಯಲ್ಲಿ ಉದ್ವೋಷಕಿಯಾಗಿ ಕೆಲಸ ವಿರ್ವಹಿಸಿದ್ದಾರೆ. ಎಲ್. ಗುಂಡಪ್ಪನವರ ಬದುಕು ಬರಹ, ನಮ್ಮ ಬದುಕು ಬರಹ ಎಂಬ ಲೇಖಕಿಯರ ಆತ್ಮಕಥೆಗಳು ಇತರರೊಂದಿಗೆ ಸಂಪಾದಿತ-2011 ಇವರ ಪ್ರಮುಖ ಕೃತಿಗಳಾಗಿವೆ. ಆಕಾಶವಾಣಿ ಹಾಗೂ ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.