ಡಾ. ಎಂ. ರವಿನಾಯ್ಕ ಇವರು ಕುವೆಂಪು ವಿಶ್ವವಿದ್ಯಾ ನಿಲಯದಿಂದ ಎಂ.ಎ., ಎಂ.ಇಡಿ., ಪಿಎಚ್.ಡಿ. ಪದವಿಗಳನ್ನು ಪಡೆದವರು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ಸಂಶೋಧನಾ ಹಾಗೂ ಬೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ಬುಡಕಟ್ಟು ಹಕ್ಕಿಯ ಹಾಡು' (ಬಿ.ಟಿ. ಲಲಿತಾ ನಾಯಕ್ : ಜೀವನ ಮತ್ತು ಸಾಹಿತ್ಯ) - 2010, 'ಬಿ.ಟಿ. ಲಲಿತಾ ನಾಯಕ್ ಅವರ ಕಾವ್ಯದ ವೈಶಿಷ್ಟ್ಯಗಳು' –2011 ರಲ್ಲಿ ಪ್ರಕಟಗೊಂಡ ಕೃತಿಗಳು. ಇವರು ಕರ್ನಾಟಕ ಸಂಘ (ಶಿವಮೊಗ್ಗ) ದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪುರಸ್ಕಾರ (1999-2000) ಹಾಗೂ ಶ್ರೀ ಸೇವಾಲಾಲ್ ಪ್ರಶಸ್ತಿ (2011 ) ಪುರಸ್ಕೃತರು.