ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ ಅಲ್ಲ ಎನ್ನುವ ಲೇಖಕರು ಅವರೆಡೂ ಪಂತಗಳ ಅನುಯಾಯಿಗಳು ಬೇರೆ ಬೇರೆ ಜಾತಿ ಸಮುದಾಯದವರು ಎಂದು ಅಭಿಪ್ರಾಯಪಡುತ್ತಾರೆ. ವೀರಶೈವ-ಲಿಂಗಾಯತರಿಗೆ ಹಾಗೂ ಬಸವಣ್ಣನಿಗೆ ಯಾವುದೇ ರೀತಿಯಿಂದ ನೋಡಿದರೂ ಸಂಬಂಧವಿಲ್ಲ ಎಂದು ಹೇಳುವ ಲೇಖಕರು ಬಸವಣ್ಣ ಯಾವುದೆ ವಚನ ಬರೆಯಲಿಲ್ಲ ಹಾಗೂ ಯಾವುದೇ ಶಿವಶರಣರು ವಚನಗಳನ್ನು ಅವರ ಕಾಲದಲ್ಲಿ ಬರೆಯಲೇ ಇಲ್ಲ ಎಂದು ವಾದಿಸುತ್ತಾರೆ.
ತುಮಕೂರು ಜಿಲ್ಲೆಗೆ ಸೇರಿದ ಮತ್ತು ಕುರುಬರ ಗುರು ವರ್ಗಕ್ಕೆ ಸೇರಿದ ಮಹಾದೇವ ಒಡೆಯರು (ಶಿವಗಣ ಪ್ರಸಾದಿ ಮಹಾದೇವ) 1420ರಲ್ಲಿ ರಚಿಸಿದ ಶೂನ್ಯ ಸಂಪಾದನೆ ಕೃತಿಯಲ್ಲಿ ಸಂವಾದಗಳನ್ನು ವಚನರೂಪದಲ್ಲಿ ಬರೆದು ವಚನಗಳಿಗೆ ನಾಮಾಂಕಿತ ನೀಡಿದವನು ಮಹಾದೇವ ಒಡೆಯರ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.
ಅಲ್ಲಮಪ್ರಭು, ಅಕ್ಕಮಹಾದೇವಿಯರಿಗೆ ಓದುಬರಹ ಬರುತ್ತಿರಲಿಲ್ಲ ಎನ್ನುವ ಲೇಖಕರು ಶಿವಶರಣರ ಹೆಸರಿನಿಂದ ಅನೇಕ ವಚನಗಳನ್ನು 18-19ನೆಯ ಶತಮಾನದಲ್ಲಿ ಲಿಂಗಾಯತ ಪ್ರಚಾರಕ್ಕಾಗಿ ಬರೆದು ವಚನಸಂಪುಟದಲ್ಲಿ ಸೇರಿಸಲಾಯಿತು ಎಂದು ಅಭಿಪ್ರಾಯಪಡುತ್ತಾರೆ. ವೀರಶೈವ ಅಥವಾ ವೀರಶೈವ ಸಾಹಿತ್ಯವು ಕುರುಬರ ಕುಲಗುರು ಒಡೆಯರಿಂದಲೇ ರಚಿಸಲಾಗಿದೆ ಎಂಬುದು ಲೇಖಕರ ನಿಲುವು.
©2024 Book Brahma Private Limited.