ಸದ್ಗುರು ನಾನಕ್‍ ದೇವ್‍

Author : ಎಸ್‍. ಸೀತಾರಾಮು

Pages 278

₹ 270.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಸಿಖ್ ಧರ್ಮದ ಪ್ರಚಾರಕರಾದ ಗುರು ನಾನಕ್‍ರವರ ಕುರಿತು ಬರೆದಂತಹ ಒಂದು ಅಪರೂಪದ ಪುಸ್ತಕ ಸದ್ಗುರು ನಾನಕ್‍ ದೇವ್‍. ಹದಿನೈದನೇ ಶತಮಾನದಲ್ಲಿ ಜನಿಸಿದಂತಹ ಗುರು ನಾನಕ್ ಅವರು ಭಾರತದ ಉದ್ದಗಲಕ್ಕೂ ಓಡಾಡಿ, ಭಾರತದ ಆದ್ಯಾತ್ಮಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದಂತಹ ಓರ್ವ ಮಹಾಣ್‍ ಧರ್ಮ ಗುರು. ಹದಿನೈದನೇ ಶತಮಾನದಲ್ಲಿ ಹಲವು ಧರ್ಮಗಳ ರಾಜರುಗಳು ಸಾಮ್ರಾಜ್ಯ ವಿಸ್ತರಣೆಯ ಹಪಾಹಪಿಯಲ್ಲಿದ್ದ ಕಾಲ. ಅಂತಹ ಕಾಲಘಟ್ಟದಲ್ಲಿ ಹೊಸತಾದಂತಹ ಒಂದು ಧರ್ಮವನ್ನು ಸ್ಥಾಪಿಸಿದ ಕೀರ್ತಿ ಗುರುನಾನಕ್ ಅವರಿಗೆ ಸಲ್ಲುತ್ತದೆ. ಧರ್ಮವನ್ನು ಸ್ಥಾಪಿಸಿದ್ದು ಮಾತ್ರವಲ್ಲದೇ, ಆ ಧರ್ಮದ ಕುರಿತು ಹಲವುಕಡೆಗಳಲ್ಲಿ ಪ್ರವಚನಗಳನ್ನು ನಡೆಸಿ ಸಾವಿರಾರು ಅನುಯಾಯಿಗಳು ಸಿಖ್ಖ್ ಧರ್ಮದೆಡೆಗೆ ಆಕರ್ಷಿತಗೊಳ್ಳುವಂತೆ ಮಾಡಿದ ಅಯಸ್ಕಾಂತೀಯ ಶಕ್ತಿ ಗುರು ನಾನಕ್‍ ಅವರದು. ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ತಮ್ಮ ಧರ್ಮದ ಬಗ್ಗೆ ಪ್ರವಚನಗಳನ್ನು ಏರ್ಪಡಿಸಿದರ ಕುರಿತಾಗಿ ಹಾಗೂ ಗುರು ನಾಣಕರ ಜೀವನದ ಕುರಿತಾಗಿ ಸೊಗಸಾಗಿ ಬರೆದಿದ್ದಾರೆ ಸೀತಾರಾಮು ಅವರು. ಅವರ ಜೀವನದ ಸುದೀರ್ಘ ಅಧ್ಯಾಗಳ ಕುರಿತು ಸವಿವರ ದಾಖಲೆಗಳೊಂದಿಗೆ ಮೂಡಿಬಂದಿರುವ ಪುಸ್ತಕ ನಿಜಕ್ಕೂ ಓದುಗರಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ.

About the Author

ಎಸ್‍. ಸೀತಾರಾಮು
(07 February 1948)

ಎಸ್.ಸೀತಾರಾಮು- ಹುಟ್ಟಿದ್ದು ಫೆಬ್ರವರಿ 7, 1948ರಂದು ಮೈಸೂರಿನಲ್ಲಿ. 1968ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಮೊದಲನೆಯ ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ. ನವೆಂಬರ್ 1971ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಪ್ರೊಬೇಶನರಿ ಆಫೀಸರ್ ಆಗಿ ಸೇರ್ಪಡೆ. ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸಮಾಡಿ ಕೊನೆಯ ನಾಲ್ಕು ವರ್ಷ ಸಿಂಡಿಕೇಟ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಮತ್ತು ಚೀಫ್ ವಿಜಿಲೆನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಫೆಬ್ರವರಿ 2008ರಲ್ಲಿ ನಿವೃತ್ತಿಯಾದರು.  ಕಲೆ, ಕನ್ನಡ ಸಾಹಿತ್ಯ, ಭಾರತೀಯ ಸಂಸ್ಕೃತಿ, ದರ್ಶನ ಶಾಸ್ತ್ರ, ಆಧುನಿಕ ಪರಿಪಾಲನಾ ಶಾಸ್ತ್ರ ಮತ್ತು ವರ್ತನ ಶಾಸ್ತ್ರಗಳು-ವಿಶೇಷ ಆಸಕ್ತಿಯ ಕ್ಷೇತ್ರಗಳು. ಕಾಷ್ಟ ಶಿಲ್ಪ ...

READ MORE

Related Books