ಪ್ರೇಮಲೋಕದ ಮಾಯಾವಿ

Author : ಹಸನ್ ನಯೀಂ ಸುರಕೋಡ

Pages 158

₹ 120.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಲಾಡ್ಜ್, ಗದಗ-582101
Phone: 9480286844

Synopsys

’ಮೈ ಪಲ್ ದೋ ಪಲ್ ಕಾ ಶಾಯರ್ ಹೂ ಯೇ ಪಲ್ ದೋ ಪಲ್ ಕಿ ಕಹಾನಿ ಹೈ' ಈ ಗೀತೆಯನ್ನು ಕೇಳದಿರುವವರು ವಿರಳ. ಈ ಪ್ರೇಮಲೋಕದ ಆಪ್ತಗೀತೆಯನ್ನು ಬರೆದ ಕವಿ ಸಾಹಿರ್‌ ಲೂದಿಯಾನ್ವಿ. ಸಾಹಿರ್‌ ಅಂದರೆ ಉರ್ದುವಿನಲ್ಲಿ ಮಾಯೆ ಎಂದರ್ಥ. ಸಾಹಿರ್‌ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತರಚನಕಾರ. ತಲ್ಲಿಯಾಂ, ಪರಭಾಯಿಯಾಂ ಮತ್ತು ಆವೋ ಕೆ ಖಾಬ್ ಇವು ಅವರ ಮೂರು ಕವನ ಸಂಕಲನಗಳು, ಹಾಗೂ 'ಗಾತಾ ಜಾಯ ಬಂಜಾರ’ ಅವರ ಚಿತ್ರಗೀತೆಗಳ ಸಂಕಲನ, ಮೃದು ಮನಸ್ಸಿನ ಸಾಹಿರ್‌ ಸ್ವಾಭಿಮಾನಿಯಾಗಿದ್ದರು. ಸಾಹಿರ್‌ ರವರು ಹಲವು ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಕೃತಿಯಲ್ಲಿ ಸಾಹಿರ್‌ ಲೂದಿಯಾನ್ವಿಯ ಸಂಪೂರ್ಣ ಜೀವನವನ್ನು ಚಿತ್ರಿಸುವ ಜೊತೆಗೆ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ.

 

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Related Books