ಕರ್ನಾಟಕದಲ್ಲಿ ೨೪ ಆಡಳಿತ ವಿಭಾಗಗಳ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಗಳನ್ನು ದಾಖಲಿಸಿದ ಬಹುಮುಖ್ಯ ಕೃತಿ ಇದು.
ಕರ್ನಾಟಕದ ಆಡಳಿತ ವಿಭಾಗಗಳ ಸೂಚನೆಗಾಗಿ ತೀರ ಪ್ರಾಚೀನ ಕಾಲದಲ್ಲಿ ಅಂದರೆ, ಶಾತವಾಹನರ ಕಾಲದಲ್ಲಿ ಭುಕ್ತಿ, ರಟ್ಟ ಎಂಬ ಉತ್ತರ ಪದಗಳನ್ನು ಬಳಸಲಾಗಿದೆ. ಕದಂಬರ ಕಾಲದಲ್ಲಿ ವಿಷಯ, ಮಂಡಲ, ರಾಷ್ಟ್ರ ಎಂಬವು ಉತ್ತರ ಪದಗಳು, ಬಾದಾಮಿ ಚಲುಕ್ಯರ ಕಾಲದಲ್ಲಿ ವಿಷಯ, ಆಹಾರ, ಭೋಗ, ರಾಷ್ಟ್ರ ಎಂಬ ಉತ್ತರ ಪದಗಳು ಕಾಣುತ್ತವೆ. ರಾಷ್ಟ್ರಕೂಟ ಕಾಲದಿಂದ ನಾಡು, ನಾಟ್ಟು, ಪಾಡಿ, ಮಂಡಲ, ವಿಷಯ, ಜನಪದ, ಭೋಗ ಪದಗಳು ಬಳಕೆಗೊಂಡಿವೆ. ಇದು ಕಲ್ಯಾಣ ಚಾಲುಕ್ಯ, ಕಲಚುರಿ, ಯಾದವ ಮತ್ತು ಹೊಯ್ಸಳರ ವರೆಗೆ ಮುಂದುವರಿದು ವಿಜಯನಗರ ಕಾಲಕ್ಕೆ ಒಮ್ಮೆಲೇ ರಾಜ್ಯ, ವೇಂಠೆ, ವೇಂಠಕ, ವಳಿತ, ಚಾವಡಿ, ಮಾಗಣಿ ಸೀಮೆ ಪದಗಳು ಕಾಣಿಸಿಕೊಳ್ಳುತ್ತವೆ. ಮರಾಠರ ಕಾಲದಲ್ಲಿ ಮಹಲು ಇತ್ಯಾದಿ ಪದಗಳು ಬಳಕೆಯಾಗಿವೆ ಎಂಬಂತಹ ಮಹತ್ವದ ಸಂಗತಿಗಳನ್ನು ಕೃತಿಯಿಂದ ಅರಿಯಬಹುದು.
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಂ.ಎಂ. ಕಲಬುರ್ಗಿ ಸಂಶೋಧಿಸದ ಕ್ಷೇತ್ರವೇ ಇಲ್ಲ ಎನ್ನುವುದಕ್ಕೆ ಈ ಕೃತಿ ಉದಾಹರಣೆ.
©2024 Book Brahma Private Limited.