ಲೇಖಕ ಎಂ. ವೆಂಕಟಸ್ವಾಮಿ ಅವರು ಬರೆದ ಜೀವನ ಚರಿತ್ರೆ ಕೃತಿ ʻನೆಲ್ಸನ್ ಮಂಡೇಲಾʼ. ಬಿಳಿಯರ ವರ್ಣಭೇದ ನೀತಿಯ ವಿರುದ್ದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಐದು ದಶಕಗಳ ಕಾಲ ಹೋರಾಡಿ ಕರಿಯರ ಏಳಿಗೆಗೆ ಕಾರಣರಾದದ ದಕ್ಷಿಣ ಆಫ್ರಿಕಾದ ಗಾಂಧಿ, ಮಹಾನ್ ಹೋರಾಟಗಾರ ನೆಲ್ಸನ್ ಮಂಡೇಲಾ. ವರ್ಣಭೇಧದ ವಿರುದ್ದ ದನಿ ಎತ್ತಿದ ಕಾರಣಕ್ಕಾಗಿ ದೇಶದ್ರೋಹ ಕೃತ್ಯದ ಆರೋಪದಡಿ ಸುಮಾರು 27 ವರ್ಷ ಸೆರೆವಾಸಕ್ಕೆ ಗುರಿಯಾದರು. ಬಳಿಕ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷರಾಗುವ ಮೂಲಕ ಆಫ್ರಿಕಾದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡರು. ಹೀಗೆ ಬದುಕಿದ್ದಾಗಲೇ ಒಂದು ದಂತಕತೆಯಾಗಿದ್ದ ನೆಲ್ಸನ್ ಮಂಡೇಲಾ ಅವರ ಬದುಕು-ಹೋರಾಟ-ಮಾನವೀಯತೆ-ಸಾಧನೆಗಳನ್ನು ಅಧಿಕೃತ ಪುರಾವೆಗಳ ಮೂಲಕ ಲೇಖಕರು ಪ್ರಸ್ತುತ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MORE