‘ನೀರದೀವಿಗೆ’ ಅಗ್ನಿ ಮತ್ತು ಜಲ ; ಕೆ.ವೈ. ನಾರಾಯಣಸ್ವಾಮಿ ಅವರು ಪಿ.ಎಚ್.ಡಿ/ಗಾಗಿ ರಚಿಸಿದ ಮಹಾಪ್ರಬಂಧ. ದೇಶದ ಸಂಸ್ಕೃತಿಯನ್ನು ‘ಅಗ್ನಿ’ ಮತ್ತು ‘ಜಲ ಮೂಲಕ ಹೊಸ ರೀತಿಯಾಗಿ ವ್ಯಾಖ್ಯಾನಿಸಲಾಗಿದೆ. 2000ರಲ್ಲಿ ಲೋಹಿಯಾ ಪ್ರಕಾಶನ ತದನಂತರ ದೇಸಿ ಪುಸ್ತಕ ಪ್ರಕಾಶನವು 2020ರಲ್ಲಿ ಈ ಕೃತಿಯನ್ನು ಮರು ಮುದ್ರಿಸಿದೆ
ಮೊದಲ ಮುದ್ರಣಕ್ಕೆ ಹಿರಿಯ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಬರೆದಿದ್ದ ಬೆನ್ನುಡಿಯ ನುಡಿಗಳನ್ನು ಎರಡನೇ ಮುದ್ರಣಕ್ಕೂ ಬಳಸಿಕೊಳ್ಳಲಾಗಿದೆ. ನೀರದೀವಿಗೆ ಒಂದು ಅಪರೂಪದ ಸಂಶೋಧನಾ ಕೃತಿ. ಈ ದೇಶದ ಸಂಸ್ಕೃತಿಯನ್ನು ಅಗ್ನಿ ಹಾಗೂ ಜಲಗಳ ಮೂಲಮಾನದಲ್ಲಿ ಗ್ರಹಿಸಿ ವ್ಯಾಖ್ಯಾನಿಸಿರುವ ಕ್ರಮ, ಈವರೆಗಿನ ಗ್ರಹಿಕೆಗಳಿಗಿಂತ ಭಿನ್ನವೂ ತರ್ಕಬದ್ಧವೂ, ಹೊಸಬಗೆಯದೂ ಆಗಿದೆ ಎಂದು ಜಿ.ಎಸ್. ಶಿವರುದ್ರಪ್ಪ ಅಭಿಪ್ರಾಯ.ಪಟ್ಟಿದ್ದಾರೆ.
©2024 Book Brahma Private Limited.