ಮೊಗ್ಗಿನ ಮಾತು- ಕಾತ್ಯಾಯಿನಿ ಕುಂಜಿಬೆಟ್ಟು ಅವರ ಸಂಶೋಧನಾ ಕೃತಿ. ಡಾ. ಎಂ.ಎಂ. ಕಲಬುರ್ಗಿ ಅವರು ಈ ಕೂರಿತು ಬರೆದು ‘ ಮಕ್ಕಳ ಸಾಹಿತ್ಯದ ಕಾವ್ಯಮೀಮಾಂಸೆ ಇನ್ನೂ ನಿರ್ದಿಷ್ಟವಾಗಿರದ ಇಂದಿನ ಸಂದರ್ಭದಲ್ಲಿ ಕಾತ್ಯಾಯಿನಿ ಆ ಮೀಮಾಂಸೆಯನ್ನು ತಾನೇ ಸೃಷ್ಟಿಸಿ, ಸೀತಾರಾಮಭಟ್ಟರ ಈ ಸಾಹಿತ್ಯಕ್ಕೆ ತಾನೇ ಅನ್ವಯಿಸಿದ ಜೋಡು ಜವಾಬ್ದಾರಿಯನ್ನು ಇಲ್ಲಿ ಪೂರೈಸಿದ್ದಾರೆ. ಆಕರ ಶೋಧದಲ್ಲಿ ವಹಿಸಿದ ಶ್ರಮ ವಿಶ್ಲೇಷಣ ಶೋಧ –ವ್ಯಾಖ್ಯಾನ ಶೋಧಗಳಲ್ಲಿ ಅನುಕರಿಸಿದ ಕ್ರಮ ತುಂಬ ಸಮರ್ಪಕವೆನಿಸಿದೆ. ಇದರಿಂದಾಗಿ ಈ ಕೃತಿ ಏಕಕಾಲಕ್ಕೆ ಸಂಶೋಧನ-ವಿಮರ್ಶನ-ಸೃಜನಗಳ ಸಂಗಮವಾಗಿ ಪರಿಣಮಿಸಿದೆ. ಸಂವಹನಶೀಲ ಅಭಿವ್ಯಕ್ತಿಯೇ ಈ ಕೃತಿಯ ಇನ್ನೊಂದು ವಿಶೇಷತೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.