ಶರಣೆಯರು ಶರಣರ ಅನುಸರಣೆಯಲ್ಲಿದ್ದು, ಪುರುಷಾಹಂಕಾರಕ್ಕೆ ಸವಾಲು ಹಾಕುವ ಛಲವನ್ನು ಆವಾಹಿಸಿಕೊಂಡರು. ಇದು ವಚನಕಾರರ ಯುಗದಲ್ಲಿ ಬಸವಾದ ಶರಣರು ಮಹಿಳೆಯರ ಆಲೋಚನಾ ಕ್ರಮಕ್ಕೆ ನೀಡಿದ ಉದಾರವಾದಿ ನೆಲೆ. ಅವರು ವರ್ಗ-ವರ್ಣ-ಜಾತಿ-ಲಿಂಗ ಸಮಾಜದ ಎಲ್ಲ ಪ್ರಶ್ನೆಗಳಿಗೆ ಪುರುಷಾಹಂಕಾರವಿಲ್ಲದೇ ವಿನಯದಿಮದ ವಚನಕಾರರು ಕೇಳಿದರೆಂಬುದಕ್ಕೆ ಶರಣೆಯರ ಎಲ್ಲ ವಚನಗಳು ಸಾಕ್ಷಿ. ಸಮತೂಕದ ಸಮಭಾವದ ದಾಂಪತ್ಯವೇ ಇದಕ್ಕೆ ಕಾರಣ. ಅಕ್ಕಮಹಾದೇವಿ, ಸತ್ಯಕ್ಕ, ಲಕ್ಕಮ್ಮ, ಸಂಕವ್ವೆ, ಲಿಂಗಮ್ಮ ಮುಂತಾದ ಶರಣೆಯರು ಎತ್ತುವ ಪ್ರಶ್ನೆಗಳಲ್ಲಿ ಮಹತ್ವದ ಆಯಾಮಗಳಿವೆ. ಈ ಕುರಿತು ಈ ಕೃತಿಯಲ್ಲಿ ಲೇಖಕರು ವಿವರವಾಗಿ ವಿವರಿಸಿದ್ದಾರೆ.
©2024 Book Brahma Private Limited.