ರಾಷ್ಟ್ರಕವಿ ಅವರ ಅಪರೂಪದ ಮತ್ತು ಮಹತ್ವದ ಛಾಯಾಚಿತ್ರಗಳನ್ನು ಒಳಗೊಂಡ ಅಪರೂಪದ ಚಿತ್ರ ಸಂಪುಟವಿದು. ಕುವೆಂಪು ಅವರ ಬಾಲ್ಯದ ದಿನಗಳಿಂದ ಹಿಡಿದು ಬದುಕಿನ ಮಹತ್ವದ ಘಟನೆಗಳನ್ನು ಚಿತ್ರಗಳಲ್ಲಿ ದಾಖಲಾಗಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಸಂಪುಟದಲ್ಲಿ ಕುವೆಂಪು ಅವರ ಬೆಳವಣಿಗೆಯನ್ನು ಚಿತ್ರಗಳ ಮೂಲಕ ದಾಖಲಿಸಲಾಗಿದೆ. ಚಿತ್ರಗಳೇ ಮಾತನಾಡುತ್ತವೆ. ಮತ್ತು ಅವೇ ಕತೆ ಹೇಳುತ್ತವೆ. ಭಾವಚಿತ್ರದ ಜೊತೆಯಲ್ಲಿಯೇ ಮಹತ್ವದ ಘಟನೆಗಳು, ಕುಟುಂಬದ ಸದಸ್ಯರ ಜೊತೆಗಿನ, ಕಾರ್ಯಕ್ರಮದ, ಆಪ್ತರು-ಸ್ನೇಹಿತರ ಜೊತೆಗಿನ ಚಿತ್ರಗಳೂ ಈ ಗ್ರಂಥದಲ್ಲಿವೆ. ಕುವೆಂಪು ಅವರ ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಅವರ ಮದುವೆ ಆಮಂತ್ರಣ ಪತ್ರಿಕೆಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಸೇರಿಸಿರುವುದು ವಿಶೇಷ. ಆರ್.ಎಸ್. ನಾಯ್ಡು, ಆರ್. ರಾಮಮೂರ್ತಿ ಮತ್ತಿತರ ಕಲಾವಿದರು ರಚಿಸಿದ ರೇಖಾಚಿತ್ರಗಳು ಇದರಲ್ಲಿವೆ. ಕುವೆಂಪು ಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಗ್ರಂಥವು ಛಾಯಾಚಿತ್ರ ಆಧರಿಸಿ ರೂಪಿಸುವ ಜೀವನ ಚರಿತ್ರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಂತಿದೆ.
©2024 Book Brahma Private Limited.