ಕನ್ನಡ ಗ್ರಾಮವೊಂದರ ಪಥಾವಲೋಕನವನ್ನು ಪ್ರತಿನಿಧಿಸುವ “ಕಾಂತಾಮರವಾದ ಕಾಂತಾವರ” ಕೃತಿಯು ಯಾವುದೇ ಗ್ರಾಮೀಣ ಸಾಹಿತ್ಯ- ಸಂಸ್ಕೃತಿಯ ಅಧ್ಯಯನಕ್ಕೆ ಆಕರ ಗ್ರಂಥ ಎನ್ನಬಹುದು. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳಿರುವಂತೆ “ಕಾಂತಾವರ ಎಂಬ ಹಳ್ಳಿಯ ಕನ್ನಡ ಮರವು ಜಂಗಮವಾಗಿ ಕನ್ನಡ ಭಿಕ್ಷೆಯನ್ನು ಉಣ್ಣುವ ಸೊಬಗಿನ ಸಂಭ್ರಮವನ್ನು ಹಂಚಿಕೊಳ್ಳಲು ಆ 43 ಮೊಳದ ಬಟ್ಟೆಯನ್ನು ’ಚಿತ್ರಪಟ ರಾಮಾಯಣ’ದಂತೆ ಚಿತ್ರಪಟ ಕಾಂತಾವರ’ ಮಾಡಿದರು. ಈ ಕಿರುದಾರಿಯು ಕರ್ನಾಟಕದಲ್ಲಿ ಹೆದ್ದಾರಿಯಾದ ಅಪೂರ್ವ ಮಾದರಿ ಇದು. ನಾ. ಮೊಗಸಾಲೆ ಎಂಬ ಆಯುರ್ವೇದ ವೈದ್ಯ ನಡೆಸಿದ ಮಾಂತ್ರಿಕ ಪ್ರಯೋಗಗಳ ಸಾಹಸಗಾಥೆ “ಕಾಂತಾವರ’ ಎಂದು ಹೇಳುವ ಮೂಲಕ ಕೃತಿಯ ಮಹತ್ವವನ್ನು ಹೆಚ್ಚಿಸಿದ್ದಾರೆ.
©2024 Book Brahma Private Limited.