ಚೆಂಬೆಳಕಿನ ಕವಿ ಚೆನ್ನವೀರ ಕಣವಿ

Author : ಜಿ.ಎಂ. ಹೆಗಡೆ

Pages 140

₹ 100.00




Year of Publication: 2017
Published by: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಎಡೆಯೂರು, ಡಂಬಳ, ಗದಗ.

Synopsys

ನವೋದಯ ಮತ್ತು ನವ್ಯದ ಕೊಂಡಿಯಂತೆ ಕೆಲಸ ಮಾಡಿದವರು ಚೆನ್ನವೀರ ಕಣವಿ ಮತ್ತು ಡಾ. ಜಿ.ಎಸ್. ಶಿವರುದ್ರಪ್ಪ. ಆ ಕಾರಣಕ್ಕೇ ಇವರಿಬ್ಬರನ್ನೂ ಆಧುನಿಕ ಸಾಹಿತ್ಯದ ಸಮನ್ವಯ ಕವಿಗಳು ಎಂತಲೂ ಹೇಳುತ್ತಾರೆ. 

ಚೆನ್ನವೀರ ಕಣವಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಸ್ನೇಹ, ಪ್ರೀತಿ, ಸೌಜನ್ಯ, ಮಾನವೀಯ ಅಂತಃಕರಣದ ಕವಿಯಾಗಿ ಪ್ರಸಿದ್ದರು. ಅವರ ಜೀವನವೂ ಸಹಜವಾಗಿಯೇ ಸಮೃದ್ಧವಾದದ್ದು, ಈ ಕೃತಿಯಲ್ಲಿ ಕಣವಿಯವರ ಜೀವನ, ಸಾಹಿತ್ಯ ಕೃಷಿಯಬಗ್ಗೆ ಸಂಪೂರ್ಣ ಪರಿಚಯವನ್ನು ಕೊಡಲಾಗಿದೆ.

ಕಣವಿಯವರ ತೊಂಬತ್ತನೆಯ ಜನ್ಮದಿನದ ಅಂಗವಾಗಿ ಪ್ರಕಟವಾದ ಕೃತಿ ಇದು. 

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Related Books