ಚೆ ಕ್ರಾಂತಿಯ ಸಹಜೀವನ

Author : ನಾ. ದಿವಾಕರ

Pages 232

₹ 160.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ದಕ್ಷಿಣ ಅಮೆರಿಕ ಕಂಡ ಅಸೀಮ ಹೋರಾಟಗಾರ ಅರ್ನೆಸ್ಟೊ ಚೆಗವಾರ. ತನ್ನ ದೇಶದಿಂದ ಮತ್ತೊಂದು ದೇಶಕ್ಕೆ ಹೋಗಿ ಅಲ್ಲಿ ಕ್ರಾಂತಿಯ ಕಹಳೆ ಮೊಳಗಿಸುವ ಆತ ಈಗಲೂ ಯುವಜನರ ಪಾಲಿನ ಕಣ್ಮಣಿ. ಚೆ ಹೋರಾಟದ ಫಲವಾಗಿಯೇ ಕ್ಯೂಬಾ ದುರಾಡಳಿತದಿಂದ ಹೊರಬಂದು ಫೀಡಲ್‌ ಕ್ಯಾಸ್ಟ್ರೋ ಅವರನ್ನು ತನ್ನ ನಾಯಕನನ್ನಾಗಿ ಸ್ವೀಕರಿಸಿತು. 

ಚೆಗವಾರ ಕುರಿತಂತೆ ಸಾಕಷ್ಟು ಪುಸ್ತಕಗಳು ಬಂದಿವೆ. ಸಿನಿಮಾಗಳನ್ನೂ ರೂಪಿಸಲಾಗಿದೆ. ಆದರೆ ಚೆಗವಾರನ ಗೆಳೆಯನಂತೆಯೇ ಇದ್ದ ಕ್ಯಾಸ್ಟ್ರೋ ಆ ಮಹಾನ್‌ ಕ್ರಾಂತಿಕಾರಿಯನ್ನು ಬಣ್ಣಿಸಿರುವ ಕಾರಣಕ್ಕೆ ಡೇವಿಡ್ ಡಚ್‌ಮನ್ ಸಂಪಾದಿಸಿರುವ ಈ ಕೃತಿಗೆ ಎಲ್ಲಕ್ಕಿಂತಲೂ ಹೆಚ್ಚಿನ ತೂಕ ಇದೆ ಎನ್ನಿಸುತ್ತದೆ. ಚೆ ಬದುಕು ಕನ್ನಡ ನೆಲದಲ್ಲೂ ಹಬ್ಬಲಿ ಎಂಬ ಉದ್ದೇಶದಿಂದ ನಾ. ದಿವಾಕರ ಕೃತಿಯನ್ನು ಅನುವಾದಿಸಿದ್ದಾರೆ. 

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Excerpt / E-Books

ನನ್ನ ಗತಜೀವನವನ್ನು ನೆನಪಿಸಿಕೊಳ್ಳುವಾಗ, ಕ್ರಾಂತಿಯ ಉದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಸಾಕಷ್ಟು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ನನ್ನ ಕಾರ್ಯ ನಿರ್ವಹಿಸಿರುವುದನ್ನು ಪ್ರಮಾಣೀಕರಿಸುತ್ತೇನೆ. ನನ್ನ ಒಂದೇ ಒಂದು ವೈಫಲ್ಯವೆಂದರೆ ಸಿಯೆರಾ ಮೇಸ್ಟಾದಲ್ಲಿದ್ದಾಗ ಪ್ರಾರಂಭಿಕ ಹಂತದಿಂದಲೇ ನಾನು ನಿಮ್ಮ ಸಂಪೂರ್ಣ ವಿಶ್ವಾಸ ಗಳಿಸಲಾಗದಿದ್ದುದು, ಮತ್ತು ನಿಮ್ಮೊಳಗಿನ ಓರ್ವ ಕ್ರಾಂತಿಕಾರಿಯ, ನಾಯಕತ್ವದ ಗುಣ ಲಕ್ಷಣಗಳನ್ನು ಶೀಘ್ರವಾಗಿ ಅರಿಯದೆ ಹೋದದ್ದು. ನಾನು ಉಜ್ವಲವಾದ ದಿನಗಳನ್ನು ಕಳೆದಿದ್ದೇನೆ. ನಿಮ್ಮ ಸಾಂಗತ್ಯದಲ್ಲಿದ್ದ ಸಂದರ್ಭದಲ್ಲಿ ಸಂಭವಿಸಿದ ಕ್ಯಾರಿಬಿಯನ್ ಕ್ಷಿಪಣಿ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನನ್ನ ದೇಶದ ಜನರೊಡನೆ ಬೆರೆತಿದ್ದ ಹೆಮ್ಮೆ ನನಗಿದೆ. ಆ ದಿನಗಳಲ್ಲಿ ನಿಮ್ಮನ್ನು ಮೀರಿದ ಒಬ್ಬ ರಾಜತಂತ್ರಜ್ಞನನ್ನು ಕಾಣುವುದು ಅಸಾಧ್ಯವೇ ಆಗಿತ್ತು. ನಾನು ಯಾವುದೇ ಅನಿಶ್ಚಿತತೆ ಇಲ್ಲದೆ ನಿಮ್ಮನ್ನು ಹಿಂಬಾಲಿಸಿದ್ದನ್ನು, ನಿಮ್ಮ ಆಲೋಚನಾ ಲಹರಿಯೊಂದಿಗೆ ಗುರುತಿಸಿಕೊಂಡಿದ್ದನ್ನು, ಅಪಾಯಗಳನ್ನು, ತತ್ವಗಳನ್ನು ನಿಮ್ಮಂತೆಯೇ ಗ್ರಹಿಸಿದ್ದುದನ್ನು ಹೆಮ್ಮೆಯಿಂದ ನೆನೆಯುತ್ತೇನೆ. ನನ್ನ ಪ್ರಾಮಾಣಿಕ ಪ್ರಯತ್ನಗಳು ಅನ್ಯ ದೇಶಗಳಲ್ಲಿ ಅವಶ್ಯವಾಗಿ ಬೇಕಾಗಿದೆ. ಕ್ಯೂಬಾ ದೇಶಕ್ಕೆ ನಾಯಕತ್ವ ನೀಡುವ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ಈ ಹೊಣೆಗಾರಿಕೆಯನ್ನು ನೀವು ಹೊರಲಾರಿರಿ, ಆದರೆ ನಾನು ಆ ಕೆಲಸ ಮಾಡಬಲ್ಲೆ. ಹಾಗಾಗಿ ನಾವಿಬ್ಬರೂ ಪರಸ್ಪರ ದೂರವಾಗುವ ಕಾಲ ಸನ್ನಿಹಿತವಾಗಿದೆ.

ಎರಡೂ ವರ್ಗಗಳ ನಡುವಿನ ಸುದೀರ್ಘ ಸಂಘರ್ಷವೇ ಮನುಕುಲದ ಇತಿಹಾಸದ ಸೂಕ್ಷ್ಮತೆಗಳನ್ನು ಹೊರಗೆಡಹುತ್ತದೆ. ಯಾವುದೇ ಕಾಲಘಟ್ಟದಲ್ಲೂ ಮಾನವ ಸಮಾಜದಲ್ಲಿ ವ್ಯಕ್ತವಾಗುವ ಈ ಸಂಘರ್ಷದ ಮೂಲಕವೇ ಮನುಕುಲ ತನ್ನ ಉಳಿವಿಗೆ ಹೊಸ ಆಯಾಮಗಳನ್ನೂ ಕಂಡುಕೊಳ್ಳುತ್ತಾ ಬಂದಿದೆ. ಹಾಗಾಗಿಯೇ ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಈ ಎರಡು ವರ್ಗಗಳ ನಡುವೆ ಘರ್ಷಣೆ ನಡೆಯುತ್ತಲೇ ಬಂದಿದೆ. ಜಾಗತಿಕ ಇತಿಹಾಸದಲ್ಲಿ ಮಾನವ ಸಮಾಜ ತನ್ನ ದಾಸ್ಯದ ಸಂಕೋಲೆಗಳನ್ನು ಕಳಚಿ ತನ್ನದೇ ಆದ ಸ್ವಂತಿಕೆಯನ್ನೂ, ಅಸ್ಮಿತೆಯನ್ನೂ ರಕ್ಷಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಅನುಸರಿಸಿದೆ. ಗುಲಾಮಗಿರಿಯ ವಿರುದ್ದ ಹೋರಾಟ, ಊಳಿಗಮಾನ್ಯ ವ್ಯವಸ್ಥೆಯ ನಿರ್ಮೂಲನೆ, ಧರ್ಮಾಧಾರಿತ ಪ್ರಭುತ್ವದ ನಿರಾಕರಣೆ, ಸಾಮ್ರಾಜ್ಯಶಾಹಿಗೆ ಪ್ರತಿರೋಧ ಹೀಗೆ ಹಲವು ವಿಧಾನಗಳಲ್ಲಿ ಮನುಕುಲ ಇತಿಹಾಸದ ಹಾದಿಯನ್ನು ಕ್ರಮಿಸಿದೆ.

- ಫೀಡೆಲ್‌ ಕ್ಯಾಸ್ಟ್ರೋ
ಚೆ ಕ್ರಾಂತಿಯ ಸಹಜೀವನ ಕೃತಿಯಿಂದ

Related Books