ಯುವಜನರನ್ನು ಅಪಾರವಾಗಿ ಪ್ರಭಾವಿಸಿದ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಆಲ್ಬರ್ಟ್ ಕಮೂ, ಬಂಡುಕೋರ ಮನಸು ಸೃಷ್ಟಿಸುವ ಸಾಹಿತ್ಯದ ಪ್ರತಿನಿಧಿ ಎಂದೇ ಪ್ರಸಿದ್ಧಿಯಾದವರು. ಸದಾ ಕಾಲಕ್ಕೂ ಪ್ರಸ್ತುತವಾಗುವ ಮನುಷ್ಯನ ಅಸ್ಮಿತೆ, ವ್ಯಕ್ತಿ ಸ್ವಾತಂತ್ರ್ಯ, ನೈತಿಕತೆ ಅನೈತಿಕತೆಗಳ ಪಾತ್ರವೇನು? ಇತ್ಯಾದಿ ಮೂಲಭೂತ ಪ್ರಶ್ನೆಗಳು ಬಂದಾಗಲೆಲ್ಲಾ ಅಲ್ಲಿ ಕಮೂವಿನ ಸಾಹಿತ್ಯ ಚರ್ಚೆಗೆ ಇದ್ದದ್ದೆ. ಕಮೂವಿನ ಕುರಿತು ಬಿಡಿಬಿಡಿಯಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ. ಆತನ ಜೀವನ ಪರಿಚಯದ ಜತೆಗೆ ಆತ ಬರೆದಿರುವ ಎರಡು ಕಥೆಗಳು, ನಾಲ್ಕು ಪ್ರಬಂಧಗಳ ಅನುವಾದ ಇಲ್ಲಿ ನೀಡಲಾಗಿದೆ. ಇದರ ಜತೆಗೆ ಆತ ಪ್ರತಿಪಾದಿಸಿದ ಬಂಡಾಯ, ಅಸಂಗತವಾದ, ಸಿಸಿಫಸ್ ಕಲ್ಪಿತ ಕಥನ, ಆತನ ಮುಖ್ಯ ಕಾದಂಬರಿಗಳ ಒಟ್ಟು ಸಾರಾಂಶವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
'ಕಮೂ ತರುಣ ವಾಚಿಕೆ' ಕೃತಿಯ ಕುರಿತು ಕೃತಿಯ ಲೇಖಕರಾದ ಕೇಶವ ಮಳಗಿ ಅವರ ನುಡಿಗಳು.
©2024 Book Brahma Private Limited.