ಬಿಳಗಿ ಅರಸು ಮನೆತನ

Author : ಎಂ.ಎಂ. ಕಲಬುರ್ಗಿ

Pages 190




Published by: ವೀರಶೈವ ಅಧ್ಯಯನ ಅಕಾಡೆಮಿ

Synopsys

ಬೀಳಗಿ ಮನೆತನದ ಮೂಲ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಐಸೂರು. ೧೪೬೦ರಲ್ಲಿ ಅದು ಉತ್ತರ ಕರ್ನಾಟಕದ ಬಿಳಗಿಗೆ ಸ್ಥಳಾಂತವಾಯಿತು. ಮೊದಲು ಜೈನಮತಸ್ಥರಾಗಿದ್ದು ನಂತರ ಶೈವ ವೀರಶೈವ ಮತಸ್ಥರಾಗಿದ್ದನ್ನು ಈ ಮನೆತನದ ವ್ಯಕ್ತಿನಾಮಗಳಿಂದ ಅರಿಯಬಹುದು. ಈ ರಾಜಮನೆತನ ಸಾಹಿತ್ಯ, ವ್ಯವಸಾಯ, ವಾಣಿಜ್ಯ, ಧರ್ಮ ವಾಸ್ತು-ಶಿಲ್ಪಕಲೆ ಮುಂತಾದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಉಲ್ಲೇಖ ಕೃತಿಯಲ್ಲಿದೆ.

ಬಿಳಗಿ ಅರಸುಮನೆತ ಕುರಿತು ಬೆಳಗಾವಿ ನಾಗನೂರು ರುದ್ರಾಕ್ಷಿಮಠ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹದಿನಾಲ್ಕು ವಿದ್ವಾಂಸರು ಮಂಡಿಸಿದ ವಿದ್ವತ್ಪೂರ್ಣ ಪ್ರಬಂಧಗಳ ಕೃತಿ ಇದು. ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ. ಎಚ್.ಆರ್. ರಘುನಾಥ ಭಟ್  ವಿಚಾರ ಸಂಕಿರಣದ ನೇತೃತ್ವ ವಹಿಸಿದ್ದರು.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books