‘ರಾಷ್ಟ್ರಕವಿ ಎಂ. ಗೋವಿಂದ ಪೈ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ರಾಷ್ಟ್ರಕವಿ ಎಂ. ಗೋವಿಂದಪೈಗಳು ಒಬ್ಬ ಮಹಾಪುರುಷ, ಕವಿ, ಕಲಾವಿದ, ನಾಟಕಕಾರ, ಗ್ರಂಥ ಕರ್ತೃ, ಪತ್ರ ಲೇಖಕರು, ಶಿಲಾಶಾಸನ ಸಂಶೋಧಕರು, ಅಪ್ರತಿಮ ಮೇಧಾಶಕ್ತಿಯುಳ್ಳವರು. ಸಾಹಿತ್ಯ ಶಕ್ತಿ, ಕಾವ್ಯಶಕ್ತಿ, ಗದ್ಯಶಕ್ತಿ ಹೇಳಲಸದಳ. ಐತಿಹಾಸಿಕ, ಖಗೋಳಶಾಸ್ತ್ರ, ಜ್ಯೋತಿಶ್ಯಾಸ್ತಗಳಲ್ಲಿ ಅಗಾಧ ಪಂಡಿತರು. ಭಾಷಾಜ್ಞಾನ ತಜ್ಞರು. ಆಳವಾದ ವಿಚಾರ ಶಕ್ತಿ ಅಪಾರವಾದ ಭಕ್ತಿ ಅವರಲ್ಲಿ ತುಂಬಿ ತುಳುಕಾಡುತ್ತಿತ್ತು. ಅಷ್ಟೇ ಅಲ್ಲ ಅವರು ಸರಳ ಜೀವಿ, ಭಾವ ಜೀವಿ ಹಾಗೂ ಉದಾರ ಮಿತ್ರರಾಗಿ ಮೆರೆದವರು, ಚಿಂತಕ, ಸಜ್ಜನ ಶಿರೋಮಣಿ, ಜೈನ, ಬೌದ್ಧ, ವೀರಶೈವ, ಸಾಹಿತ್ಯ ವಿಶಾರದ, ಸಂಗೀತ ಪ್ರಿಯರು, ಸಂಗೀತಜ್ಞರು, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಕನ್ನಡಿಗ ಹಾಗೂ ಭಾರತೀಯ.
ಜಪಾನಿ, ಪಾಲಿ ಭಾಷಾ ಕೃತಿಗಳ ಅನುವಾದಕ, ಬಹುಭಾಷಾ ತಜ್ಞರು, ಬಂಗಾರದಂಥ ಮನಸ್ಸು, ಮಗುವಿನಂತೆ ಮುಗ್ಧತೆ, 'ಗೋವಿಂದ ಪೈಗಳು ಕನ್ನಡದ ಆಸ್ತಿ, ಜ್ಞಾನದೀಪ, ಜ್ಞಾಪಕ ದೀಪ, ಅದೆಲ್ಲಕ್ಕಿಂತ ಅವರಲ್ಲಿಯ ಮಾನವೀಯತೆ ನಿತ್ಯ ನೂತನವಾದುದು. ಒಂದಿಷ್ಟು ಆಡಂಬರವಿಲ್ಲ, ಕೃತಿಮತೆಯಿಲ್ಲ. ಅದೊಂದು ಪೂರ್ಣ ಕುಂಭ ಎನ್ನುತ್ತಾರೆ ದ.ಬ. ಕುಲಕರ್ಣಿ. ಅಂಥಹ ಮಹಾನ್ ಸಾಧಕರ ಬಗ್ಗೆ ಮಕ್ಕಳಿಗೆ ತಿಳಿಸಲು ಈ ಕೃತಿಯನ್ನು ರಚಿಸಲಾಗಿದೆ.
©2024 Book Brahma Private Limited.