ಮಾತಾಹರಿ

Author : ಜೆ.ಬಾಲಕೃಷ್ಣ

Pages 56

₹ 25.00




Year of Publication: 2007
Published by: ಬೆಂಗಳೂರು ಪ್ರಗತಿ ಗ್ರಾಫಿಕ್ಸ್

Synopsys

ಮಾತಾಹರಿ ಭವ್ಯಕನಸುಗಳನ್ನು ಕಂಡವಳು, ಬದುಕನ್ನು ಅತಿಯಾಗಿ ಪ್ರೀತಿಸಿದವಳು. ಆಕೆಯ ಹೆಸರು ಬೇಹುಗಾರಿಕೆಯೊಂದಿಗೆ ತಳುಕುಹಾಕಿಕೊಂಡಿತ್ತಾದರೂ ಆಕೆ ಗೂಢಚಾರಳಾಗಿದ್ದಳೇ ಎಂಬೂದು ಇನ್ನೂ ತಿಳಿದು ಬಂದಿ‌ಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಆಕೆಯ ಬದುಕನ್ನು ಗುಮಾನಿಯಿಂದ ನೋಡಲಾಗುತ್ತಿತ್ತಾದರೂ, ಬದುಕಲು ಬೇರೆ ದಾರಿಕಾಣದಾಗ ಮಾತಾಹರಿ ತನ್ನ ದೇಹದಮೇಲಿನ ವಸ್ತ್ರಗಳನ್ನು ಒಂದೊಂದಾಗಿ ಜನರೆದುರು ತೆರೆದು ಅವರನ್ನು ಮೋಹಕಗೊಳಿಸಿ ಬದುಕಿದವಳು. ಭಾರತವನ್ನೇ ನೋಡಿರದಿದ್ದರೂ ತಾನೊಬ್ಬ ಬ್ರಾಹ್ಮಣ ಪೂಜಾರಿಯ ಹಾಗೂ ಕಾಳಿ ದೇವಿಯ ದೇಗುಲದ ನರ್ತಕಿಯ ಮಗಳೆಂದು ಹೇಳಿಕೊಂಡವಳು. ಅವಳ ಬದುಕಿನ ಪ್ರೀತಿ ಮತ್ತು ಪೌರುಷ ಯುದ್ಧದ ಕ್ರೌರ್ಯಕ್ಕೆ ಮುಖಮುಖಿಯಾಗಿ ನಿಲ್ಲಲು ಸಾಧ್ಯವಿರಲಿಲ್ಲ. ಈ ಕ್ರೌರ್ಯಕ್ಕೆ ಬಲಿಯಾದ ಮಾತಾಹರಿಯ ಸಂಪೂರ್ಣ ಜೀವನದ ಚಿತ್ರಣ ಈ ಕೃತಿಯಲ್ಲದೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books