ಭಾರತದ ಸಮಾಜವಾದಿ ಆಂದೋಲನದಲ್ಲಿ ರಾಮಮನೋಹರ ಲೋಹಿಯಾ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರ ಜನ್ಮ ಶತಮಾನೋತ್ಸವ ಮುಗಿಯುತ್ತಿರುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲನ್ನು ನೋಡುವ ಪ್ರಯತ್ನವಾಗಿ ’ ಲೋಹಿಯಾ ವ್ಯಕ್ತಿ ಮತ್ತು ವಿಚಾರ’ ಒಂದು ವಿಭಿನ್ನ ವಿಮರ್ಶೆ ಕೃತಿಯನ್ನು ಹೊರತರಲಾಗಿದೆ.
ಲೋಹಿಯಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಬಾಪು ಹೆದ್ದೂರಶೆಟ್ಟಿಯವರು ತಮ್ಮ ಈ ಕೃತಿ ರಚನೆಯ ಪ್ರಯತ್ನದಲ್ಲಿ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಪುಟಗಳನ್ನೂ, ಭಾರತದ ಹಾಗೂ ವಿಶ್ವದ ಸಮಾಜವಾದಿ ಚಿಂತನೆಯ ಹಲವಾರು ಪದರಗಳನ್ನೂ ತಿರುವಿ ಹಾಕಿದ್ದಾರೆ. ಪುಸ್ತಕ ಓದಿದರೆ ಲೋಹಿಯಾ ಅವರ ವ್ಯಕ್ತಿತ್ವದ ಹಾಗೂ ವಿಚಾರಗಳ ಇನ್ನೊಂದು ಮಗ್ಗುಲದ ಪರಿಚಯವಾಗುವುದರ ಜೊತೆಗೆ ಓದುಗರಿಗೆ ಭಾರತದ ಸಮಾಜವಾದಿ ಆಂದೋಲನದ ಇತಿಹಾಸದ ಹಲವಾರು ಘಟನೆಗಳ ಬಗ್ಗೆ, ಸಮಾನತೆ, ಸಮಾನ ಅವಕಾಶ, ಕಲ್ಯಾಣ ರಾಜ್ಯ, ಮೊದಲಾದ ಸಮಾಜವಾದಿ ಪರಿಕಲ್ಪನೆಗಳ ಬಗೆಗೆ ಭಾರತದ ಹಾಗೂ ವಿಶ್ವದ ಚಿಂತನಾಕ್ರಮದ ಪರಿಚಯವೂ ಆಗುತ್ತದೆ.
©2024 Book Brahma Private Limited.