ಖುರ್ಶೇದ್ ನರೀಮನ್

Author : ವ್ಯಾಸರಾಯ ಬಲ್ಲಾಳ

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಖುರ್ಶೇದ್ ನರೀಮನ್ ಜೀವನಚರಿತ್ರೆ ಪುಸ್ತಕವನ್ನು ಲೇಖಕ ವ್ಯಾಸರಾಯ ಬಲ್ಲಾಳ ಅವರು ರಚಿಸಿದ್ದಾರೆ. ಮುಂಬಯಿಯ ಸಿಂಹ ಎನಿಸಿಕೊಂಡ ನರೀಮನ್ ದೇಶಕ್ಕಾಗಿ ಹೋರಾಡಿ ಸೆರೆಮನೆ ಕಂಡರು. ಪುರಸಭೆಯಲ್ಲಿ, ಸರ್ಕಾರದ ಆಡಳಿತದಲ್ಲಿ ಅನ್ಯಾಯ ಕಂಡ ಕಡೆ ಅದನ್ನು ಪ್ರತಿಭಟಿಸಿದರು. ದೇಶೀಯ ಸಂಸ್ಥಾನದ ರಾಜರೊಬ್ಬರು ಅನ್ಯಾಯ ಮಾಡಿದಾಗ ಹೋರಾಟ ನಡೆಸಿ ಅವರು ಸಿಂಹಾಸನವನ್ನೇ ಕಳೆದುಕೊಳ್ಳುವಂತೆ ಮಾಡಿದರು. ಮುಂಬಯಿಯಲ್ಲಿ ಆಂಗ್ಲರ ಮೋಸವನ್ನು ಬಯಲಿಗೆ ತಂದರು. ಭಾರತೀಯರು ಮೆಚ್ಚಿಕೆಯಿಂದ ಅವರನ್ನು ’ವೀರ ನರೀಮನ್’ ಎಂದು ಕರೆದರು ಎಂದು ಖುರ್ಶೇದ್ ನರೀಮನ್ ಅವರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

About the Author

ವ್ಯಾಸರಾಯ ಬಲ್ಲಾಳ
(01 December 1923 - 30 January 2008)

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ...

READ MORE

Related Books