ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಭಕ್ತಿಜ್ಞಾನ ವೈರಾಗ್ಯದ ಸೊಗಡಿನಂತೆ ಕಂಡುಬಂದರು ಅವರ ಕವಿತ್ವಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಅಂಶಗಳನ್ನು ಮನಗಾಣಬಹುದು. ಆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಸುಪ್ತ ಸಂರಚನೆಯಲ್ಲಿ ಅವರ ಕರ್ತೃತ್ವ ಕೆಲಸ ಮಾಡುತ್ತಾ ಮುಂದೆ ಸಾಗಿದೆ. ಅವರ ಚಿಂತನೆಗಳು ಈಗಿನ ಕಾಲಕ್ಕೆ ತುಂಬಾ ಅನಿವಾರ್ಯ ಅಗತ್ಯತೆಯಾಗಿದೆ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಕನಕದಾಸರ ಪ್ರಸ್ತುತತೆಯನ್ನು ಮನಗಂಡು ಸಂಶೋಧನಾ ಸೌಲಭ್ಯಗಳೇ ಇಲ್ಲದ ಅಂದಿನ ಸಂದರ್ಭದಲ್ಲಿ ಪರಿಶ್ರಮಪಟ್ಟವರು. ಕನಕದಾಸರ ಶ್ರಮ ಮತ್ತು ಕನಕರ ಚಿಂತನೆಗಳನ್ನು ಕಟ್ಟಿ ಶೇಷಾಚಾರ್ಯರು ಈ ಕೃತಿಯಲ್ಲಿ ವಿವರಿಸಿದ್ದಾರೆ.