`ಅವತಾರ್ ಮತ್ತು ಹಾರುವ ಕುದುರೆ’ ಕೃತಿಯು ನಾಗರಾಜ ಎಂ.ಹುಡೇದ ಅವರ ಮಕ್ಕಳ ಕಥಾ ಸಂಕಲನವಾಗಿದೆ. ಮಕ್ಕಳ ಮನೋಜ್ಞಾನವನ್ನು ಗ್ರಹಿಸಿಕೊಂಡು ಈ ಕೃತಿಯು ರಚಿತವಾಗಿದ್ದು, ಇಲ್ಲಿ ಸಾಮಾನ್ಯ ಕತೆಗಳು ಕೂಡ ಅಡಕವಾಗಿವೆ. ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ನೆನಪಿಸಿಕೊಳ್ಳುವ ಮೂಲಕ ಈ ಕೃತಿಯ ಕಥಾಹಂದರವು ಪ್ರಾರಂಭಗೊಳ್ಳುತ್ತದೆ. ಅಜ್ಜನ ಪಾತ್ರದ ಮೂಲಕ ಲೇಖಕರು ಇಲ್ಲಿ ಕತೆಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪರಿಸರ ಕಾಳಜಿಯನ್ನು ಇಲ್ಲಿ ಬಿಂಬಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ತಮ್ಮಣ್ಣ ಬೀಗಾರ ಅವರು, ಮಕ್ಕಳ ಸುತ್ತಲಿನ ಸಂಗತಿಯನ್ನೇ ಉತ್ತರ ಕರ್ನಾಟಕದ ಆಡು ಭಾಷೆಯ ಸೊಗಡಿನೊಂದಿಗೆ ಇಡಲು ಪ್ರಯತ್ನಿಸಿದ್ದಾರೆ. ಮಕ್ಕಳಿಗೆ ಆಪ್ತವಾಗುವಂತಿದೆ. ಅವತಾರ್ ಮತ್ತು ಹಾರುವ ಕುದುರೆ, ಕಪ್ಪೆಗಳ ಮದುವೆ, ಮಾತಾಡುವ ಮರ ಮುಂತಾದ ಕಥೆಗಳು ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಶವಿಲ್ಲ.ಅಜ್ಜ ಮಕ್ಕಳೊಂದಿಗೆ ಪ್ರೀತಿಯಿಂದ ಮಾತಿಗಿಳಿದಿದ್ದಾರೆ. ಅವನು ಮರ, ಕಪ್ಪೆ, ಕಾಡು ಪ್ರಾಣಿಗಳು, ಕನಸಿನ ಲೋಕ, ಹಸಿರುಗುಡ್ಡ ಎಲ್ಲ ತಂದಿಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ನಾಗರಾಜ ಎಂ.ಹುಡೇದ ಅವರು ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡದವರು. 2004ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುತ್ತಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು : ನಗುವ ತುಟಿಗಳಲ್ಲಿ(ಕವನ ಸಂಕಲನ), ಸುವರ್ಣ ಜ್ಞಾನ (ಕರ್ನಾಟಕ ಸಂಬಂಧಿತ ರಸಪ್ರಶ್ನೆಗಳು), ಕಿರುಗೊಂಚಲು (ಸಂಪಾದಿತ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ), ಭರವಸೆ (ಕವನ ಸಂಕಲನ), ಶಬ್ದಕೋಶ (ಕನ್ನಡ, ಗೌಳಿ, ಇಂಗ್ಲಿಷ್ ಭಾಷೆಯಲ್ಲಿ), ...
READ MORE