ಚಮತ್ಕಾರಿ ಚಾಕ್ಲೇಟು-ಸೋಮು ಕುದರಿಹಾಳ ಅವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಕಲನ. ಮಕ್ಕಳ ಸಾಹಿತ್ಯ ವಲಯದಲ್ಲಿ ಕೃತಿಗಳ ರಚನೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಕಥಾ ಸಂಕಲನ ಬರುತ್ತಿದ್ದು ಗಮನ ಸೆಳೆದಿದೆ. ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ್ ಅವರ ಕೃತಿಗೆ ಬೆನ್ನುಡಿ ಬರೆದು ‘ಸುತ್ತಲಿನ ಶಾಲಾ ಸಮಯವನ್ನು ಉಲ್ಲಾಸಮಯವಾಗಿಸುವ ಮತ್ತು ಮಕ್ಕಳನ್ನು ಕಲಿಕೆಗೆ ಅನಾಯಾಸ ಹುರಿಗೊಳಿಸುವ ಸಾಧನವಾಗಿ ಕಥೆಗಳನ್ನು ಬಳಸಿಕೊಳ್ಳುವ ಹಂಬಲವಿದೆ. ಇಲ್ಲಿಯ ಕಥೆಗಳಲ್ಲಿ ರಂಜನೆ ಬಹು ಮುಖ್ಯವಾಗಿ ಮುನ್ನೆಲೆಯಲ್ಲಿದೆ. ಮಕ್ಕಳಿಗೆ ಹೇಗೆಲ್ಲ ಹೇಳಬಹುದು, ಅವರನ್ನು ಹೇಗೆಲ್ಲಾ ಕುತೂಹಲದ, ಚಮತ್ಕಾರದ ಪ್ರಸಂಗಗಳಲ್ಲಿ ಹಿಡಿದಿಡಬಹುದು, ನಗಿಸಬಹುದು, ವಾತಾವರಣವನ್ನು ಆಪ್ತವಾಗಿಸಬಹುದು ಎಂಬುದರ ಸೊಗಸು ಇಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ.
ಕವಿ, ಕಥೆಗಾರ ಸೋಮು ಕುದರಿಹಾಳ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಂದಾಪುರದವರು. ಕಳೆದ ಹನ್ನೆರಡು ವರ್ಷಗಳಿಂದ ಗಂಗಾವತಿಯ ಕುಂಟೋಜಿ ಲಕ್ಷ್ಮೀಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ಇವರಿಗೆ 2018ರ ತಾಲ್ಲೂಕು ’ಉತ್ತಮ ಶಿಕ್ಷಕ ಪ್ರಶಸ್ತಿ, ಗಂಗಾವತಿ ತಾಲ್ಲೂಕಕು ಕರವೇಯಿಂದ ಕನ್ನಡ ಶಿಖಾಮಣಿ ಪ್ರಶಸ್ತ’ಗಳೂ ಲಭಿಸಿವೆ. ಕೃತಿಗಳು: ಜಾಡು ತಪ್ಪಿದ ನಡಿಗೆ (ಕವನ ಸಂಕಲನ). ...
READ MORE