ಮುಲ್ಲಾ ನಸ್ರುದ್ದೀನ್ ಕತೆಗಳು ಯಾರಿಗೆ ಪರಿಚಯವಿಲ್ಲ ಹೇಳಿ? ಮುಲ್ಲಾ ನಸ್ರುದ್ದೀನ್ ಪುಟ್ಟ ಪುಟ್ಟ ಕತೆಗಳು ಓದಲು ಸರಳ ಹಾಗೂ ಸುಂದರ. ಹತ್ತು ಸಾಲುಗಳಿಂದ ಆರಂಭವಾಗಿ ಎರಡು ಪುಟಗಳವರೆಗೂ ಸಾಗುತ್ತವೆ. ಕಥೆ ಸಣ್ಣದಿರಲಿ; ದೊಡ್ಡದಿರಲಿ; ಒಟ್ಟಿನಲ್ಲಿ ಅವು ಉಂಟು ಮಾಡುವ ಪರಿಣಾಮ ಮಾತ್ರ ಮಕ್ಕಳು ಸೇರಿದಂತೆ ದೊಡ್ಡವರಿಗೂ ಖುಷಿ ನೀಡುತ್ತವೆ.
ಕಾದಂಬರಿಕಾರ ದು.ನಿಂ. ಬೆಳಗಲಿಯವರು (ಪೂರ್ಣ ಹೆಸರು: ದುರದುಂಡೇಶ್ವರ ನಿಂಗಪ್ಪ ಬೆಳಗಲಿ, ಜನನ: 30-03-1931) ಹುಟ್ಟಿದ್ದು ಬನಹಟ್ಟಿಯಲ್ಲಿ. ತಂದೆ ನಿಂಗಪ್ಪ. ತಾಯಿ ಚೆನ್ನಮ್ಮ, ಅಥಣಿ ತಾಲ್ಲೂಕಿನ ಐನಾಪುರ ಇವರ ಮೂಲ. ಬನಹಟ್ಟಿಯಲ್ಲಿ ನೆಲೆಸಿದ್ದರು. ಒಣಬಾಳೇ ದಿಂಡು ಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂಬ ಅಡ್ಡ ಹೆಸರಾಯಿತು. ತಾಯಿ ಜಾನಪದ ಕಥೆಗಳ ಹಾಡುಗಾರ್ತಿ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಶಾಲೆಯಲ್ಲಿ (1951-55) ಶಿಕ್ಷಕರಾದರು. ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ(1957) ಪ್ರಕಟ, ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಹಾಗೂ ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದರು. 1960 ರಲ್ಲಿ ಮೊದಲ ಕಾದಂಬರಿ ಮುಳ್ಳು ...
READ MORE