‘ಹಿರಿಯರು ಹೇಳಿದ ಕೆಲವು ಕಥೆಗಳು’ ಕೃತಿಯು ಎನ್. ಗೋಪಾಲಕೃಷ್ಣ ಉಡುಪ ಅವರ ಕತಾಸಂಕಲನವಾಗಿದೆ. ಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ- ಮಾನವರಿಗೆ ಸಂಬಂಧಿಸಿದ ಕಥಗೆಳ ಸಂಗ್ರಹವಾಗಿದೆ. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ‘ಜಾಣತನ ಹಾಗೂ ಅದ್ಭುತ ಸಾಧನೆ’ ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ ‘ಮೂವರು ಮೋಸಗಾರ ಸೋದರರು’, ಮಗನೇ ತಂದೆಯ ಕಣ್ತೆರೆಸಿದ ಕಥೆ ‘ಗೋರಿಗಳು’. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು ‘ಕಹಿನುಡಿ’ ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು ‘ದುರಾಸೆಯ ಕಾಗೆ’ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು ‘ನರಿಯ ಅಹಂಕಾರ’ ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಭೋದಕವಾಗಿದೆ.
©2024 Book Brahma Private Limited.