ಲೇಖಕರಾದ ನೀಲತ್ತಹಳ್ಳಿ ಕಸ್ತೂರಿ ಅವರ ಕೃತಿ ’ ನಮ್ಮ ಕಥೆ’ ಮೊದಲ ಮುದ್ರಣ ಕಂಡಿದ್ದು 1960 ರಲ್ಲಿ. ನಾವು ನಿಲ್ಲುವುದಕ್ಕೆ, ನಡೆಯುವುದಕ್ಕೆ, ಕೂರುವುದಕ್ಕೆ, ಮಲಗುವುದಕ್ಕೆ- ಒಟ್ಟಿನಲ್ಲಿ ನಾವು ಇರುವುದಕ್ಕೆ ಏಕೈಕ ಅಧಾರವಾದ ಭೂಮಿ ಹೇಗೆ ಹುಟ್ಟಿತು ? ಭೂಮಿಯ ಮೇಲೆ ಜೀವ ಮೊದಲು ಹೇಗೆ ಕಾಣಿಸಿಕೊಂಡಿತು? ಈ ಜೀವ ಹೇಗೆ ಬೆಳೆಯಿತು? ಹೀಗೆ ಬೆಳೆದ ಜೀವಕೋಟಿಯಲ್ಲಿ ಮನುಷ್ಯ ವರ್ಗದ ಹಿರಿಮೆಯೇನು? ಮುಂದೆ ನಡೆಯಬೇಕಾದ ದಿಕ್ಕು ಯಾವುದು? ಎಂಬ ಇದೇ ಮೊದಲಾದ ಅನೇಕ ಮುಖ್ಯ ಪ್ರಶ್ನೆಗಳಿಗೆ ’ನಮ್ಮ ಕಥೆ’ ಉತ್ತರಿಸುತ್ತದೆ.
ಮಾನವನ ಇತಿಹಾಸದ ಮಹಾಕತೆಯನ್ನು ಕನ್ನಡದಲ್ಲಿ ಮಕ್ಕಳಿಗೂ ತಲುಪಿಸಬೇಕು ಎನ್ನುವ ಆಶಯದೊಂದಿಗೆ ಈ ಕೃತಿ ಹೊರಬಂದಿದೆ.
ಭೂಮಿ ಹುಟ್ಟಿತು, ಹುಳು ಹುಲಿಯಾಯಿತು, ವಿಚಿತ್ರ ಮೃಗಶಾಲೆ, ತಾತಮಂಗ, ಮರ ಇಳಿದ ಮಂಗ ಮನುಷ್ಯನಾದ, ಬೇಟೆಗಾರ ಬಂದ, ಮನಸ್ಸಿದ್ದರೆ ಮಹಾದೇವ, ಬೀಜದಿಂದ ಬೆಳೆ, ಮನುಷ್ಯನ ಜೊತೆಗಾರರು, ಅಲೆದಾಡುವ ಅಣ್ಣ ಊರು ಕಟ್ಟಿ ನಿಂತ, ಊರಿಗೊಬ್ಬ ರಾಜ, ವಿಜ್ಞಾನದ ವಿಚಿತ್ರಗಳು ಮುಂತಾದ ಬರಹಗಳು ಪ್ರಮುಖವಾಗಿದೆ.
ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...
READ MORE